ಹೊಸದಿಗಂತ ಡಿಜಿಟಲ್ ಡೆಸ್ಕ್:
ಪೇಯಿಂಟ್ ಮಿಕ್ಸ್ ಮಾಡುವ ಟಿನ್ನರ್ ಕುಡಿದು ಬಾಲಕಿ ಪ್ರಾಣಬಿಟ್ಟಿರುವ ದಾರುಣ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಪೂಜಾರಹಳ್ಳಿಯಲ್ಲಿ ನಡೆದಿದೆ. ಛಾನ್ಸಿ ಅಲಿಯಾಸ್ ಜಾನು (3) ಮೃತಪಟ್ಟ ಬಾಲಕಿ.
ಎರಡು ದಿನಗಳ ಹಿಂದೆ ಟಿನ್ನರ್ ಕುಡಿದು ತೀವ್ರ ಅಸ್ವಸ್ಥಗೊಂಡಿದ್ದಳು. ಕುಡಿಯುವ ನೀರು ಎಂದು ಭಾವಿಸಿ ಟಿನ್ನರ್ ಕುಡಿದಿದ್ದಳು. ಅಸ್ವಸ್ಥ ಬಾಲಕಿಗೆ ಬೆಂಗಳೂರಿನ ಇಂದಿರಾಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.
ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಬಾಲಕಿ ಮೃತಪಟ್ಟಿದ್ದಾಳೆ. ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮಗಳ ಕಳೆದುಕೊಂಡ ಪೋಷಕರು ಕಂಗಾಲಾಗಿದ್ದಾರೆ.

