February 17, 2026
Tuesday, February 17, 2026
spot_img

ತಾಯಿ ಕಣ್ಣೆದುರೇ ಕಂದಮ್ಮನಿಗೆ ಇಂತಹ ಸ್ಥಿತಿ ಬರಬಾರದಿತ್ತು! ಕಟುಕನಿಗೆ ಯಮಸ್ವರೂಪಿಯಾದ ಗ್ರಾಮಸ್ಥರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಾನಸಿಕ ಅಸ್ವಸ್ಥ ಎಂದು ಹೇಳಲಾದ ವ್ಯಕ್ತಿಯೊಬ್ಬ ಏಕಾಏಕಿ ಮನೆಗೆ ನುಗ್ಗಿ ತಾಯಿ ಎದುರಲ್ಲೇ 5 ವರ್ಷದ ಮಗುವಿನ ಶಿರಚ್ಛೇದ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

5 ವರ್ಷದ ಮಗು ವಿಕಾಸ್‌ ಮೃತ ದುರ್ದೈವಿ, ಮಹೇಶ್ (25) ಹತ್ಯೆಗೈದ ಆರೋಪಿ.

ಪ್ರತ್ಯಕ್ಷದರ್ಶಿಗಳು ಹೇಳುವಂತೆ, ಕೊಲೆಗಾರನನ್ನ ಇದುವರೆಗೆ ಆ ಕುಟುಂಬಸ್ಥರು ನೋಡಿದ್ದೇ ಇಲ್ಲ. ಏಕಾಏಕಿ ಬೈಕ್‌ನಲ್ಲಿ ಬಂದು ಮನೆಯೊಳಕ್ಕೆ ನುಗ್ಗಿದವನು, ಸಲಾಕೆ ತೆಗದುಕೊಂಡು ಮಗುವಿನ ತಲೆಗೆ ರಪ್ಪನೆ ಬಡಿದಿದ್ದಾನೆ, ಅಷ್ಟಕ್ಕೆ ಸುಮ್ಮನಾಗದೇ ಮಗುವಿನ ಗುತ್ತಿಗೆ ಹಿಡಿದು ತಲೆಯನ್ನ ಕತ್ತರಿಸಿದ್ದಾನೆ.

ಕೃತ್ಯ ಕಂಡು ಗ್ರಾಮಸ್ಥರು ಆರೋಪಿಯನ್ನ ಚೆನ್ನಾಗಿ ಥಳಿಸಿದ್ದಾರೆ, ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಥಳಿತದಿಂದ ಗಂಭೀರನಾಗಿದ್ದ ಆರೋಪಿಯನ್ನ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲೇ ಸಾವನ್ನಪ್ಪಿದ್ದಾನೆ.

ಇದು ಅತ್ಯಂತ ಹೃದಯ ವಿದ್ರಾವಕ ಘಟನೆ. ಗ್ರಾಮಸ್ಥರು ಕ್ರೋಧಗೊಂಡಿದ್ದರಿಂದ ಪೊಲೀಸರು ಬರೋ ಮೊದಲೇ ಆರೋಪಿಗೆ ಥಳಿಸಿದ್ದಾರೆ. ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಆತ ಸಾವನ್ನಪ್ಪಿದ್ದಾನೆ. ಶವವನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಆತ ಮಾನಸಿಕ ಅಸ್ವಸ್ಥನೆಂದು ತಿಳಿದುಬಂದಿದೆ ಎಂದು ಧಾರ್ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !