April 11, 2026
Saturday, April 11, 2026
spot_img

ವಿವಾದ ಸೃಷ್ಟಿಸಿಕೊಂಡ ಕಂಗನಾ ರಣಾವತ್: ಮತ್ತೆ ಏನಾಯಿತು? ಈ ಸ್ಟೋರಿ ಓದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನ ಖಡಕ್ ನಟಿ ಕಂಗನಾ ರಣಾವತ್ ಮತ್ತೆ ವಿವಾದಾತ್ಮಕ ಹೇಳಿಕೆಗಳ ಮೂಲಕ ಗಮನ ಸೆಳೆದಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಅವರು ಬಿ-ಟೌನ್‌ನ ಖಾನ್, ನಿರ್ದೇಶಕರು ಹಾಗೂ ಯುವ ನಟಿಯರ ಬಗ್ಗೆ ಮುಚ್ಚುಮರೆಯಿಲ್ಲದೆ ಮಾತನಾಡಿದ್ದಾರೆ.

ಖಾಸಗಿ ವಾಹಿನಿ ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್, ಶಾರುಖ್ ಖಾನ್ ಮತ್ತು ಅಮೀರ್ ಖಾನ್ ಇವರಲ್ಲಿ ಯಾರು ನಿಮ್ಮ ಬೆಸ್ಟ್ ಫ್ರೆಂಡ್ ಎಂಬ ಪ್ರಶ್ನೆಗೆ ಕಂಗನಾ ನಗುತ್ತಾ, “ಅವರು ಯಾವಾಗ ನನ್ನ ಸ್ನೇಹಿತರಾದರು?” ಎಂದು ಪ್ರತಿಪ್ರಶ್ನೆ ಹಾಕಿದರು. ಆದರೆ ನಂತರ ಸಲ್ಮಾನ್ ಖಾನ್ ಸ್ವಲ್ಪ ಕೂಲ್ ವ್ಯಕ್ತಿ ಎಂದು ಹೇಳಿ ಸಣ್ಣ ಮಟ್ಟಿನ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಇಂದಿನ ಪೀಳಿಗೆಯ ನಟಿಯರಲ್ಲಿ ಯಾರು ಉತ್ತಮ ಎಂಬ ಪ್ರಶ್ನೆಗೆ ಅನನ್ಯ ಪಾಂಡೆ ಹೆಸರು ಉಲ್ಲೇಖಿಸಿದರೂ, ಅದರಲ್ಲಿ ವ್ಯಂಗ್ಯ ಅಡಗಿತ್ತು ಎನ್ನುವುದು ಸಿನಿ ವಲಯದ ಮಾತು.

ಇದನ್ನೂ ಓದಿ:

ಇದೇ ವೇಳೆ ಅನುರಾಗ್ ಕಶ್ಯಪ್, ಕರಣ್ ಜೋಹರ್ ಮತ್ತು ಆದಿತ್ಯ ಚೋಪ್ರಾ ಅವರಲ್ಲಿ ಯಾರು ಬೆಸ್ಟ್ ಡೈರೆಕ್ಟರ್ ಎಂಬ ಪ್ರಶ್ನೆಗೆ ಕಂಗನಾ ಫುಲ್ ಗರಂ ಆಗಿ “ನನ್ನ ಸಿನಿಮಾ ಸ್ಟ್ಯಾಂಡರ್ಡ್ಸ್ ಇಷ್ಟು ಕೀಳುಮಟ್ಟದ್ದಲ್ಲ. ಅಟ್ಲೀಸ್ಟ್ ಒಂದು ಒಳ್ಳೆ ಲಿಸ್ಟ್ ಆದರೂ ಕೊಡಬಾರದಿತ್ತೇ? ಎಂದು ಕಿಡಿಕಾರಿದರು.

ವಿವಾದಗಳ ನಡುವೆಯೂ ಕಂಗನಾ ತಮ್ಮ ಹೊಸ ಸೈಕಲಾಜಿಕಲ್ ಥ್ರಿಲ್ಲರ್ ಪ್ರಾಜೆಕ್ಟ್‌ನಲ್ಲಿ ತೊಡಗಿಸಿಕೊಂಡಿದ್ದು, ನಟ ಆರ್. ಮಾಧವನ್ ಜೊತೆ ಮತ್ತೆ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !