April 14, 2026
Tuesday, April 14, 2026
spot_img

ದುಬೈ, ಬಹ್ರೈನ್‌ನಲ್ಲಿ ಸಿಲುಕಿರುವ ಕನ್ನಡಿಗರು ಸ್ಥಳೀಯ ಅಧಿಕಾರಿಗಳ ಸಲಹೆ ಪಾಲಿಸಿ: ರಾಜ್ಯ ಸರ್ಕಾರ ಸೂಚನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಿಂದ ಹಲವು ದೇಶಗಳ ವಾಯುಪ್ರದೇಶ ತಾತ್ಕಾಲಿಕವಾಗಿ ಬಂದ್ ಆಗಿರುವ ಹಿನ್ನೆಲೆಯಲ್ಲಿ ದುಬೈ ಹಾಗೂ ಬಹ್ರೈನ್‌ನಲ್ಲಿ ಒಟ್ಟು 109 ಮಂದಿ ಕನ್ನಡಿಗರು ಸಿಲುಕಿರುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ.

ಇವರಲ್ಲಿ ದುಬೈನಲ್ಲಿ 100 ಮಂದಿ, ಬಹ್ರೈನ್‌ನಲ್ಲಿ 9 ಮಂದಿ ಇದ್ದಾರೆ. ಸಿಲುಕಿರುವವರು ಸ್ಥಳೀಯ ಮಾರ್ಗಸೂಚಿಗಳನ್ನು ಪಾಲಿಸಿ, ಭಾರತೀಯ ರಾಯಭಾರ ಕಚೇರಿಗಳ ಸಹಾಯವಾಣಿ ಹಾಗೂ ಅಧಿಕೃತ ಪೋರ್ಟಲ್‌ಗಳ ಮೂಲಕ ನೋಂದಣಿ ಮಾಡಿಕೊಳ್ಳಬೇಕು ಎಂದು ಸರ್ಕಾರ ಸೂಚಿಸಿದೆ.

ಸಿಲುಕಿರುವವರಲ್ಲಿ 32 ಮಂದಿ ಬಳ್ಳಾರಿ ಜಿಲ್ಲೆಯವರು, 25 ಮಂದಿ ಬೆಂಗಳೂರಿನವರು, 9 ಮಂದಿ ದಾವಣಗೆರೆ ಜಿಲ್ಲೆಯವರು ಸೇರಿದಂತೆ ಇತರ ಜಿಲ್ಲೆಗಳ ನಿವಾಸಿಗಳೂ ಸೇರಿದ್ದಾರೆ.

ಇದನ್ನೂ ಓದಿ:

ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ ಸಕ್ರಿಯಗೊಂಡಿದೆ. ಕೇಂದ್ರ ಸರ್ಕಾರ, ಭಾರತೀಯ ರಾಯಭಾರ ಕಚೇರಿಗಳು ಹಾಗೂ ವಿಮಾನಯಾನ ಸಂಸ್ಥೆಗಳೊಂದಿಗೆ ಸಮನ್ವಯ ನಡೆಸಿ ವಾಪಸ್ಸು ಕರೆತರುವ ಕ್ರಮಗಳ ಕುರಿತು ಚರ್ಚೆ ನಡೆಯುತ್ತಿದೆ.

ನಾಗರಿಕ ವಿಮಾನಯಾನ ಸಚಿವಾಲಯದ ಮಾಹಿತಿಯಂತೆ ಇರಾನ್, ಇಸ್ರೇಲ್, ಲೆಬನಾನ್, ಸೌದಿ ಅರೇಬಿಯಾ, ಬಹ್ರೈನ್, ಒಮನ್, ಇರಾಕ್, ಜೋರ್ಡನ್, ಕುವೈತ್, ಯುಎಇ ಹಾಗೂ ಖತಾರ್ ದೇಶಗಳ ವಾಯುಪ್ರದೇಶ ಇನ್ನೂ ಮುಚ್ಚಲ್ಪಟ್ಟಿದೆ. ಪರಿಸ್ಥಿತಿಗೆ ಅನುಗುಣವಾಗಿ ಮುಂದಿನ ಕ್ರಮಗಳನ್ನು ಪ್ರಕಟಿಸಲಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !