Monday, December 1, 2025

ಕಾಂತಾರ- 1 ಸಕ್ಸಸ್: ಕಟೀಲು ಶ್ರೀ ಕ್ಷೇತ್ರಕ್ಕೆ ನಿರ್ಮಾಪಕ ವಿಜಯ್‌ ಕಿರಗಂದೂರು ಭೇಟಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕಾಂತಾರ ಚಾಪ್ಟರ್‌ 1 ಯಶಸ್ವಿ ಹಿನ್ನೆಲೆಯಲ್ಲಿ ಹೊಂಬಾಳೆ ಪಿಲ್ಮ್ಸ್ ಮಾಲಕ, ನಿರ್ಮಾಪಕ ವಿಜಯ್‌ ಕಿರಗಂದೂರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಬೇಟಿ ನೀಡಿ ದೇವರ ದರುಶನ ಪಡೆದರು.

ದೇವಳದ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ದೇವರ ಶೇಷವಸ್ತ್ರ, ಪ್ರಸಾದ ನೀಡಿದರು.

ನಿರ್ಮಾಪಕ ವಿಜಯ್ ಕಿರಂದೂರು ತಮ್ಮ ಪ್ರತೀ ಸಿನಿಮಾ ಬಿಡುಗಡೆ ಸಂದರ್ಭ ಕಟೀಲು ಅಮ್ಮನ ದರುಶನ ಪಡೆದು, ಅನ್ನದಾನ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.

error: Content is protected !!