March 26, 2026
Thursday, March 26, 2026
spot_img

ರಣಜಿ ಫೈನಲ್ಸ್‌ | ಎರಡನೇ ದಿನದ ಮೊದಲ ಅವಧಿಯಲ್ಲಿ ಕರ್ನಾಟಕಕ್ಕೆ ಮೇಲುಗೈ

ಹೊಸದಿಗಂತ ವರದಿ ಹುಬ್ಬಳ್ಳಿ:

ಮೊದಲನೇ ದಿನ ಶತಕ ಗಳಿಸಿ ಅಜೇಯರಾಗಿ ಉಳಿದಿದ್ದ ಶುಭಂ ಸಿಂಗ್ ಪುಂಡಿರ (121 ರನ್, 247 ಎಸೆತ, 12 ಬೌಂಡರಿ, 2 ಸಿಕ್ಸ್) ಬುಧವಾರ ಬೇಗ ವಿಕೆಟ್ ಒಪ್ಪಿಸಿದರು.

ಇಲ್ಲಿಯ ರಾಜನಗರದ ಕೆಎಸ್ ಸಿಎ ಮೈದಾನದಲ್ಲಿ ನಡೆಯುತ್ತಿರುವ ಫೈನಲ್ ಪಂದ್ಯದಲ್ಲಿ ಎರಡನೇ ದಿನ ಮೊದಲ ಅವಧಿಯಲ್ಲಿ ಜಮ್ಮು- ಕಾಶ್ಮೀರ ತಂಡ ಎರಡು ವಿಕೆಟ್ ಕಳೆದು ಕೊಂಡಿತು. ವಿದ್ಯಾಧರ ಪಾಟೀಲ ಅವರು ಶುಭಂ ಸಿಂಗ್ ಹಾಗೂ ಪ್ರಸಿದ್ಧ ಕೃಷ್ಣಾ ಅಬ್ದುಲ್ ಸಮದ್ಧ ಅವರನ್ನು ವಿಕೆಟ್ ಪಡೆದರು. ಜಮ್ಮು-ಕಾಶ್ಮೀರ 102 ಓವರ್ ಗೆ 327 ಕ್ಕೆ ತನ್ನ 4 ವಿಕೆಟ್ ಕಳೆದು ಕೊಂಡಿದೆ. ರಿಟೈಡ್೯ ಹಟ್೯ ಆಗಿದ್ದ ಜಮ್ಮು ಕಾಶ್ಮೀರ ನಾಯಕ ಪಾರಸ್ ಹಾಗೂ ಕನ್ಹಯ್ಯ ವಾಧ್ವಾನ್ ಕ್ರೀಸ್ ನಲ್ಲಿ ಇದ್ದಾರೆ. ಕರ್ನಾಟಕ ಪರ ಪ್ರಸಿದ್ಧ ಕೃಷ್ಣಾ ಮೂರು ವಿಕೆಟ್ ಪಡೆದಿದ್ದು, ಎರಡನೇ ದಿನ ಮೊದಲ ಅವಧಿಯಲ್ಲಿ ಕರ್ನಾಟಕ ತಂಡ ಮೇಲು ಗೈ ಸಾಧಿಸಿದೆ.

ಆಟಗಾರ ನಡುವೆ ಮಾತಿನ ಚಕಮಕಿ: ಪ್ರಸಿದ್ಧ ಹಾಕಿದ 100 ಓವರನಲ್ಲಿ ಜಮ್ಮು ಕಾಶ್ಮೀರ ನಾಯಕ ಪರಾಸ್ ಡೋಗ್ರಾ ಅವರು ಮೂರು ಬೌಂಡರಿ ಹೊಡೆದರು. ಅದೇ ಓವರಿನಲ್ಲಿ ಕರ್ನಾಟಕ ಫಿಲ್ಡರ್ ಅನೀಶ್ ಕೆ.ವಿ. ಹಾಗೂ ನಾಯಕ ಡೋಗ್ರಾ ನಡುವೆ ಮಾತಿನ ಚಕಮಕಿ ನಡೆಯಿತು. ಆಗ ಮಯಾಂಕ್ ಅಗರವಾಲ್ ಮಧ್ಯ ಪ್ರವೇಶಿದಾಗ ಅದು ತಾರಕ್ಕೆ ಏರಿತು. ತಕ್ಷಣ ಅಂಪೈರ್ ಮಧ್ಯ ಪ್ರವೇಶಿ ನಿಯಂತ್ರಿಸಿದರು. ಆಗ ಗ್ಯಾಲರಿಯಲ್ಲಿದ್ದ ಪ್ರೇಕ್ಷಕರು ಏರು ಧ್ವನಿಯಲ್ಲಿ ಕೂಗಿದರು. ಆ ಓವರ್ ಮುಗಿಯುವ ವರೆಗೂ ಕೂತುಹಲ ಹೆಚ್ಚಾಗಿತ್ತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !