Saturday, December 20, 2025

WEATHER | ಅತಿಯಾದ ಚಳಿಗೆ ನಡುಗಿದ ಕರುನಾಡು, ಹೇಗಿದೆ ಇಂದಿನ ಹವಾಮಾನ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಇಂದು ಒಣಹವೆ ವಾತಾವರಣ ಇರಲಿದೆ. ಜತೆಗೆ ಗಾಳಿ ಗುಣಮಟ್ಟದಲ್ಲಿ ಬದಲಾವಣೆಗಳು ಆಗಲಿದೆ.

ಕೆಲವು ಜಿಲ್ಲೆಗಳಲ್ಲಿ ಮಂಜು ಕಾಣಿಸಿಕೊಂಡಿದೆ. ಬೆಂಗಳೂರು ನಗರದಲ್ಲಿ 15°C, ಬೆಂಗಳೂರು ಗ್ರಾಮಾಂತರ 14°C ಉಷ್ಣಾಂಶ ದಾಖಲಾಗಿದೆ. ಬೆಂಗಳೂರು ನಗರದಲ್ಲಿ ಇಂದು ತಾಪಮಾನ ಶೇಕಾಡ 24.4ರಷ್ಟು ಇರಲಿದೆ. ಹಾಗೂ ಬೆಂಗಳೂರು ಗ್ರಾಮೀಣ ಭಾಗದಲ್ಲಿ ಶೇಕಾಡ 24.6ರಷ್ಟು ಇದೆ.

ಶುಕ್ರವಾರ (ಡಿ.19) ಹಾಗೂ ಶನಿವಾರ (ಡಿ.20) ಕೂಡ ಇದೆ ತಾಪಮಾನ ಇರಬಹುದು ಎಂದು ಹವಾಮಾನ ಇಲಾಖೆ ಹೇಳಿದೆ. ಬೆಂಗಳೂರು ನಗರದ ಭಾಗದಲ್ಲಿ ಇಂದು ಮಂಜಿನ ವಾತಾವರಣ ಇರಲಿದೆ. ಗ್ರಾಮೀಣ ಭಾಗದಲ್ಲಿ ಮಂಜು ಮತ್ತು ಮಬ್ಬು ಎರಡು ಕೂಡ ಕಾಣಿಸಲಿದೆ.

ಇನ್ನು ಉತ್ತರ ಕರ್ನಾಟಕ ಭಾಗಗಳಾದ ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಬಾಗಲಕೋಟೆ, ವಿಜಯಪುರ, ಬೀದರ್, ಕಲಬುರಗಿ, ಯಾದಗಿರಿ, ಕೊಪ್ಪಳ, ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಕೂಡ ಒಣ ಹವಾಮಾನ ಮುಂದುವರಿಯಲಿದೆ ಎಂದು ಇಲಾಖೆ ಹೇಳಿದೆ. ಇನ್ನು ಕರ್ನಾಟಕದ ದಕ್ಷಿಣ ಒಳನಾಡು ಭಾಗದಲ್ಲಿ ಹೆಚ್ಚಾಗಿ ಒಣ ಹವೆ ಇರುತ್ತದೆ, ಆಕಾಶವು ಶುಭ್ರವಾಗಿರುತ್ತದೆ, ಸೂರ್ಯಾಸ್ತದ ನಂತರ ತಾಪಮಾನದಲ್ಲಿ ತೀವ್ರ ಕುಸಿತ ಕಂಡುಬರುತ್ತದೆ. ಇಲ್ಲಿಗೆ ಹೋಲಿಸಿದರೆ ಕರಾವಳಿ ಭಾಗದಲ್ಲಿ ಮಧ್ಯಮ ಉಷ್ಣತೆ ಮತ್ತು ತೇವಾಂಶ ಇರುತ್ತದೆ. ಮಂಗಳೂರಿನಂತಹ ನಗರಗಳಲ್ಲಿ ಗರಿಷ್ಠ ತಾಪಮಾನ 33°C ಸಮೀಪ ಇರುತ್ತದೆ .

error: Content is protected !!