ಹೊಸದಿಗಂತ ವರದಿ,ಶಿರಸಿ:
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಯ ನಿಮಿತ್ತ ನಾಮಪತ್ರ ಹಿಂಪಡೆಯುವ ಕೊನೆಯ ದಿನವಾದ ಅ.30 ರಂದು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಜಿ.ಸುಬ್ರಾಯ ಭಟ್ಟ ಬಕ್ಕಳ ಶಿರಸಿ,ಹಾಗೂ ಬಸವರಾಜ ಪಾಟೀಲ ಮುಂಡಗೋಡ ಇವರುಗಳು ತಮ್ಮ ನಾಮಪತ್ರ ಹಿಂಪಡೆದಿರುವುದರಿಂದ ಕಣದಲ್ಲಿ ನರಸಿಂಹ ಅಡಿ ಶಿರಸಿ, ಮತ್ತು ಪ್ರದೀಪ ರಾಮಚಂದ್ರ ಶೆಟ್ಟಿ ಶಿರಸಿ ಉಳಿದಿದ್ದಾರೆ.
ಅಂತೆಯೇ ಮೂರು ಸ್ಥಾನಗಳ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಐವರಲ್ಲಿ ಓರ್ವರಾದ ರವಿ ಹೆಗಡೆ ಗಡಿಹಳ್ಳಿ ಶಿರಸಿ ಇವರು ನಾಮಪತ್ರ ಹಿಂಪಡೆದರೂ ನಾಲ್ವರಾದ ಮಾರುತಿ ನಾಯ್ಕ ಹೊನ್ನಾವರ, ನರಸಿಂಹ ಸಾತೊಡ್ಡಿ, ಬಸವರಾಜ ಪಾಟೀಲ ಮುಂಡಗೋಡ, ಹಾಗೂ ಸುಮಂಗಲಾ ಹೊನ್ನೆಕೊಪ್ಪ ಅವರು ಕಣದಲ್ಲಿ ಉಳಿಯುವಂತಾಯಿತು.
ಆದ್ದರಿಂದ ಒಂದು ಹುದ್ದೆಯ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಮೂರು ಹುದ್ದೆಯ ಉಪಾಧ್ಯಕ್ಷ ಸ್ಥಾನಕ್ಕೆ ನವೆಂಬರ 9 ರಂದು ಮುಂಜಾನೆ 9 ಗಂಟೆಯಿಂದ 3 ಗಂಟೆಯ ವರೆಗೆ ಚುನಾವಣೆ ನಡೆಯಲಿದೆ. ಆನಂತರ ಮತ ಎಣಿಕೆ ಮಾಡಲಾಗುವುದಲ್ಲದೇ ಬಳಿಕ ಫಲಿತಾಂಶವನ್ನೂ ಘೋಷಿಸಲಾಗುತ್ತದೆ.
ಇನ್ನುಳಿದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಘವೇಂದ್ರ ಬೆಟ್ಟಕೊಪ್ಪ, ಮೂರು ಸ್ಥಾನಗಳ ಕಾರ್ಯದರ್ಶಿ ಹುದ್ದೆಗೆ ಅನಂತ ರಾಮಚಂದ್ರ ದೇಸಾಯಿ ಜೋಯಡಾ, ಪ್ರಭಾವತಿ ಜ.ಗೋವಿ ಯಲ್ಲಾಪುರ, ಮತ್ತು ಜೆ.ಆರ್ .ಸಂತೋಷ ಕುಮಾರ ಶಿರಸಿ ಸ್ಪರ್ಧಿಸಿದ್ದು ಆವಿರೋಧವಾಗಿದೆ. ಖಜಾಂಚಿ ಹುದ್ದೆಗೆ ರಾಜೇಂದ್ರ ಹೆಗಡೆ ಶಿಂಗನಮನೆ ಅವರ ಒಂದೇ ನಾಮಪತ್ರ ಸಲ್ಲಿಕೆಯಾದ್ದರಿಂದ ಅವರೂ ಅವಿರೋಧವಾಗಿದೆ. ಒಂದು ಸ್ಥಾನದ ರಾಜ್ಯ ಕಾರ್ಯಕಾರಿಣಿ ಸದಸ್ಯ ಹುದ್ದೆಗೆ ರಾಧಾಕೃಷ್ಣ ಭಟ್ಟ ಭಟ್ಕಳ, ಕೆಕ್ಕಾರ ನಾಗರಾಜ ಭಟ್ಟ ಸಿದ್ದಾಪುರ ನಾಮಪತ್ರ ಹಿಂಪಡೆದಿರುವುದರಿಂದ ಕಣದಲ್ಲಿರುವ ವಿಠ್ಠಲದಾಸ ರಾಮದಾಸ ಕಾಮತ್ ಅಂಕೋಲಾ ಅವರ ಹುದ್ದೆಯೂ ಅವಿರೋಧವಾಗಿದೆ
15 ಸ್ಥಾನಗಳ ಜಿಲ್ಲಾ ಕಾರ್ಯಕಾರಿಣಿಗೆ ಕೇವಲ 10 ನಾಮಪತ್ರಗಳು ಸ್ವೀಕಾರವಾಗಿದ್ದು ಅವೆಲ್ಲವೂ ಸಮರ್ಪಕವಾಗಿದ್ದರಿಂದ ಅವಿರೋಧವಾಗಿದೆ.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನ.9 ರಂದು ಚುನಾವಣೆ ನಡೆಯಲಿದೆ ಎಂದು ಚುನಾವಣಾಧಿಕಾರಿ ಅಶೋಕ ಹಾಸ್ಯಗಾರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

