ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರೂರುದಲ್ಲಿ ನಡೆದ TVK ವಿಜಯ್ ರ‍್ಯಾಲಿ ಸಮಯದ ಕಾಲ್ತುಳಿತದ ಘಟನೆಗೆ ಸಂಬಂಧಿಸಿದಂತೆ, ನಟ ಹಾಗೂ ಟಿವಿಕೆ ಪಕ್ಷದ ನಾಯಕ ವಿಜಯ್ ದಳಪತಿ ಸ್ವತಂತ್ರ ತನಿಖೆ ಅಥವಾ ಸಿಬಿಐ ತನಿಖೆ ನಡೆಸಬೇಕೆಂದು ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ವಿಚಾರಣೆ ಇಂದು ಮದ್ರಾಸ್ ಹೈಕೋರ್ಟ್‌ನಲ್ಲಿ ನಡೆಯಲಿದೆ.
ಟಿವಿಕೆ ಪಕ್ಷದ ವಕೀಲರು ಅರ್ಜಿಯಲ್ಲಿ ಹೇಳಿರುವಂತೆ, ಘಟನೆ ಹಿಂದೆ ಕ್ರಿಮಿನಲ್ ಪಿತೂರಿ ಇದೆ. ಆದ್ದರಿಂದ ರಾಜಕೀಯ ಸಂಸ್ಥೆಯ ಮೂಲಕ ತನಿಖೆ ನಡೆಸಬಾರದು, ನ್ಯಾಯಾಲಯವೇ ವಿಶೇಷ ತನಿಖಾ ತಂಡ ರಚಿಸಬೇಕು ಅಥವಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಮನವಿ ಮಾಡಲಾಗಿದೆ. ಅವರು ಮುಂದಿನ ರ‍್ಯಾಲಿಗಳಿಗೆ ಪ್ರೋಟೋಕಾಲ್ ತಯಾರಾಗುವವರೆಗೆ ನಟ ವಿಜಯ್ ರ‍್ಯಾಲಿ ನಡೆಸದಂತೆ ಮನವಿ ಮಾಡಿದ್ದಾರೆ.
ನ್ಯಾಯಾಲಯದ ತೀರ್ಪು ಈ ಪ್ರಕರಣದಲ್ಲಿ ತನಿಖೆ ಎಷ್ಟು ಸ್ವತಂತ್ರವಾಗಿ ನಡೆಯಲಿದೆ ಎಂಬುದನ್ನು ನಿರ್ಧರಿಸುವ ಪ್ರಮುಖ ಮೆಟ್ಟಿಲಾಗಲಿದೆ.