Sunday, November 23, 2025

ಕೇರಳದ ಶಬರಿಮಲೆಯಲ್ಲಿ ಹರಿದು ಬಂದ ಭಕ್ತಸಾಗರ: ಕೇರಳ ಸರ್ಕಾರಕ್ಕೆ ಹೈಕೋರ್ಟ್ ತರಾಟೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಶಬರಿಮಲೆಯಲ್ಲಿ ಮಂಡಲ ಪೂಜೆ, ಮಕರವಿಳಕ್ಕು ಉತ್ಸವ ಶುರುವಾಗಿದೆ. ಹೀಗಾಗಿ ಭಕ್ತಸಾಗರವೇ ಹರಿದುಬರುತ್ತಿದ್ದು, ಅವ್ಯವಸ್ಥೆಯ ಆಗರವೇ ಸೃಷ್ಟಿಯಾಗಿದೆ.

ಇದರ ಬೆನಲ್ಲೇ ಕೇರಳ ಹೈಕೋರ್ಟ್​​, ಕೇರಳ ಸರ್ಕಾರಕ್ಕೆ ತರಾಟೆ ತೆಗೆದುಕೊಂಡಿದೆ. ಮತ್ತೊಂದೆಡೆ ಕೇರಳದಲ್ಲಿ ಅಮಿಬಾ ಕಾಯಿಲೆ ಉಲ್ಬಣಗೊಂಡಿದೆ.

ಅತಿಯಾದ ಜನಸಂದಣಿಯಿಂದಾಗಿ ಮಹಿಳಾ ಮಾಲಾಧಾರಿಯೊಬ್ಬಳು ಮೃತಪಟ್ಟಿದ್ದಾಳೆ. ಕ್ಷೇತ್ರದಲ್ಲಿ ಭಾರೀ ಅವ್ಯವಸ್ಥೆ ಉಂಟಾಗಿರುವ ಆರೋಪ ಕೇಳಿ ಬಂದಿದ್ದು, ಕೇರಳ ಸರ್ಕಾರ ಮತ್ತು ಶಬರಿಮಲೆ ದೇವಸ್ಥಾನ ಆಡಳಿತ ಮಂಡಳಿಯನ್ನು ಕೇರಳ ಕೋರ್ಟ್​ ತರಾಟೆ ತೆಗೆದುಕೊಂಡಿದೆ.

ಜ್ಯೋತಿ ಮಾಸಾಚರಣೆಗಾಗಿ ಗರ್ಭಗುಡಿ ಬಾಗಿಲು ತೆರೆದ ಎರಡೇ ದಿನಗಳಲ್ಲಿ 2ಲಕ್ಷಕ್ಕೂ ಅಧಿಕ ಅಯ್ಯಪ್ಪ ಅಯ್ಯಪ್ಪ ವ್ರತಧಾರಿಗಳು ಆಗಮಿಸಿದ್ದಾರೆ. ಇದರಿಂದ ಭಾರೀ ನೂಕುನುಗ್ಗಲು ಉಂಟಾಗಿದೆ. ಮಾಲಾಧಾರಿಗಳು, ಸರತಿ ಸಾಲನ್ನು ಬಿಟ್ಟು ಮುನ್ನುಗ್ಗುತ್ತಿರುವುದರಿಂದ. ಹದಿನೆಂಟು ಮೆಟ್ಟಿಲಿನಲ್ಲಿ ಭಕ್ತರನ್ನು ನಿಯಂತ್ರಿಸಲು ದೇವಾಲಯದ ಆಡಳಿತ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

ಅಯ್ಯಪ್ಪನ ದರುಶನಕ್ಕೆ ಸರತಿ ಸಾಲಿನಲ್ಲಿ 5ರಿಂದ 8 ಗಂಟೆಗಳ ಕಾಲ ನಿಲ್ಲಬೇಕಾಗಿದ್ದು, ಸರಿಯಾದ ಮೂಲಸೌಕರ್ಯ ಇಲ್ಲದೇ.ಕುಡಿಯುವ ನೀರಿಗೂ ಬವಣೆ ಪಡುವಂತಾಗಿದೆ. ಕೆಲವರಿಗೆ ಜನದಟ್ಟಣೆಯಲ್ಲಿ ಉಸಿರಾಟ ಸಮಸ್ಯೆ ಉಂಟಾಗಿ, ಅಸ್ವಸ್ಥಗೊಂಡಿದ್ದಾರೆ.

ಇನ್ನು ವರ್ಚುಯಲ್ ಕ್ಯೂ ಮೂಲಕ ದಿನವೊಂದಕ್ಕೆ 70 ಸಾವಿರ ಮತ್ತು ಸ್ಪಾಟ್​​ನಲ್ಲಿ 20 ಸಾವಿರ ಬುಕ್ಕಿಂಗ್ ಮಾಡುವ ವ್ಯವಸ್ಥೆಯನ್ನು ಶಬರಿಮಲೆ ದೇವಾಲಯ ಮಾಡಿದೆ. ಆದ್ರೆ ಅದರಿನ್ನೂ ಸರಿಯಾಗಿ ಕಾರ್ಯರೂಪಕ್ಕೆ ಬರದೇ ಇರುವುದೇ ದೊಡ್ಡ ಸಮಸ್ಯೆ ಎನ್ನುವುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಕೇರಳ ಸರ್ಕಾರಕ್ಕೆ ಹೈಕೋರ್ಟ್ ಖಡಕ್​​​ ವಾರ್ನಿಂಗ್​​
ಸಾಲು ಸಾಲು ಕಾಲ್ತುಳಿತ ದುರಂತಗಳ ಬಳಿಕವೂ ಕೇರಳ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಹೈಕೋರ್ಟ್​ ಸೂಚನೆ ಕೊಟ್ರು, ಶಬರಿಮಲೆಯಲ್ಲಿ ಭಕ್ತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲುವಲ್ಲಿ ವಿಫಲವಾಗಿದೆ. ಹೀಗಾಗಿ ಕೇರಳ ಸರ್ಕಾರ ಮತ್ತು ದೇವಾಲಯ ಆಡಳಿತ ಮಂಡಳಿಯನ್ನು ತರಾಟೆ ತೆಗೆದುಕೊಂಡಿದೆ. ಅಧಿಕಾರಿಗಳ ನಡುವಿನ ಸಮನ್ವಯದ ಕೊರತೆಯಿಂದಾಗಿ ಪರಿಸ್ಥಿತಿ ನಿಯಂತ್ರಣ ತಪ್ಪಿದೆ. ಸೂಕ್ತ ವ್ಯವಸ್ಥೆ ಕೈಗೊಳ್ಳದಿದ್ದರೆ, ಅನಾಹುತ ನಿಶ್ಚಿತ ಎಂದು ಕೇರಳ ಹೈಕೋರ್ಟ್​​ ಖಡಕ್​ ವಾರ್ನಿಂಗ್​ ಕೊಟ್ಟಿದೆ.

ಮಿದುಳು ತಿನ್ನುವ ಅಮೀಬಾ ಬಗ್ಗೆ ಎಚ್ಚರ ವಹಿಸಲು ಸೂಚನೆ
ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ರೋಗದ ಹಾವಳಿ ಇದೆ. ಹೀಗಾಗಿ ಕೇರಳದ ಶಬರಿಮಲೆಗೆ ಅಯ್ಯಪ್ಪಸ್ವಾಮಿ ದರುಶನಕ್ಕಾಗಿ ಹೋಗುವ ರಾಜ್ಯದ ಭಕ್ತರಿಗೆ ರಾಜ್ಯ ಆರೋಗ್ಯ ಇಲಾಖೆ ಮಾರ್ಗಸೂಚಿ ಹೊರಡಿಸಿದ್ದು, ನಿಂತ ನೀರಿನಲ್ಲಿ ಸ್ನಾನ ಮಾಡುವಾಗ ಎಚ್ಚರ ವಹಿಸುವಂತೆ ಸೂಚಿಸಿದೆ.

error: Content is protected !!