ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬಿಗ್ ಬಾಸ್ ನಲ್ಲಿ ಅದ್ದೂರಿಯಾಗಿ ಗಿಲ್ಲಿ ನಟ ವಿನ್ನರ್ ಆಗಿದ್ದು, ಇದಾದ ಬಳಿಕ ಎಲ್ಲೆಡೆ ಉತ್ತಮ ಸ್ವಾಗತ ಸಿಕ್ಕಿದೆ.
ಇನ್ನು ಇದರ ಹಿಂದೆ ಕಿಚ್ಚ ಸುದೀಪ್ ಶ್ರಮ ಕೂಡ ಇದೆ ಎಂದರೂ ತಪ್ಪಾಗಲಾರದು. ಗಿಲ್ಲಿ ವಿಷಯದಲ್ಲೂ ಸುದೀಪ್ ಅನೇಕ ಸಲಹೆ ನೀಡಿದ್ದಾರೆ. ಇತ್ತೀಚೆಗೆ ಖಾಸಗಿಯಾಗಿ ಇಬ್ಬರ ಭೇಟಿ ನಡೆದಿದೆ. ಈ ವೇಳೆ ಸುದೀಪ್ ಕೊಟ್ಟ ಸಲಹೆ ಬಗ್ಗೆ ಗಿಲ್ಲಿ ನಟ ಮಾತನಾಡಿದ್ದಾರೆ.
ಈ ಬಾರಿಯ ಬಿಗ್ ಬಾಸ್ ಅಲ್ಲಿ ಗಿಲ್ಲಿ ಅನೇಕ ಬಾರಿ ತಪ್ಪು ಮಾಡಿದ್ದರು. ಆಗ ಗಿಲ್ಲಿಗೆ ಸುದೀಪ್ ಕಿವಿಮಾತುಗಳನ್ನು ಹೇಳಿದರು. ತಪ್ಪು ಮಾಡಿದಾಗ ಅವರನ್ನು ತಿದ್ದೋ ಕೆಲಸ ಮಾಡಿದ್ದಾರೆ. ಫಿನಾಲೆ ದಿನ ಸುದೀಪ್ ಎದುರು ಧನ್ಯವಾದ ಅರ್ಪಿಸಿದ್ದರು ಗಿಲ್ಲಿ. ‘ಸಾಯೋವರೆಗೂ ನಿಮ್ಮನ್ನು ಮರೆಯಲ್ಲ’ ಎಂದಿದ್ದರು. ಬಿಗ್ ಬಾಸ್ ಗೆದ್ದ ಬಳಿಕ ಗಿಲ್ಲಿ ಅವರು ಸುದೀಪ್ ಅವರನ್ನು ಭೇಟಿ ಮಾಡಿದ್ದಾರೆ.
ಸುದೀಪ್ ಅವರು ಗಿಲ್ಲಿಗೆ ಸಲಹೆ ನೀಡಿದ್ದಾರೆ. ‘ಯೋಚಿಸಿ ಹೆಜ್ಜೆ ಇಡಬೇಕು’ ಎಂದು ಗಿಲ್ಲಿಗೆ ಕಿವಿಮಾತು ಹೇಳಿದ್ದಾರೆ. ಇದನ್ನು ಗಿಲ್ಲಿ ಅಳವಡಿಸಿಕೊಳ್ಳುವ ಭರವಸೆ ನೀಡಿದ್ದಾರೆ.
ದೊಡ್ಡ ಗೆಲುವು ಸಿಕ್ಕಾಗ ಮನಸ್ಸು ನಮ್ಮ ಹಿಡಿತದಲ್ಲಿ ಇರೋದಿಲ್ಲ. ಗೆದ್ದಿದ್ದೇವೆ ಎಂಬ ಖುಷಿಯಲ್ಲಿ ಕೆಲವೊಮ್ಮೆ ತಪ್ಪು ಹೆಜ್ಜೆಗಳನ್ನು ಇಡೋ ಸಾಧ್ಯತೆ ಇರುತ್ತದೆ. ಆ ರೀತಿ ಆಗದಿರಲಿ ಎಂಬುದು ಸುದೀಪ್ ಬಯಕೆ.


