January19, 2026
Monday, January 19, 2026
spot_img

CPL ನಲ್ಲಿ ಕೀರನ್ ಪೊಲಾರ್ಡ್ ಆರ್ಭಟ: 5 ಸಿಕ್ಸ್, 5 ಫೋರ್! ಭರ್ಜರಿ ದಾಖಲೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೆರಿಬಿಯನ್ ಪ್ರೀಮಿಯರ್ ಲೀಗ್ (CPL 2025)‌ನಲ್ಲಿ ಟ್ರಿನ್‌ಬಾಗೊ ನೈಟ್ ರೈಡರ್ಸ್ ಸ್ಫೋಟಕ ಆಲ್‌ರೌಂಡರ್ ಕೀರನ್ ಪೊಲಾರ್ಡ್ ಮತ್ತೊಮ್ಮೆ ಬ್ಯಾಟ್‌ನಲ್ಲಿ ಬೆಂಕಿ ಹಚ್ಚಿದ್ದಾರೆ. ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ 23ನೇ ಲೀಗ್ ಪಂದ್ಯದಲ್ಲಿ ಪೊಲಾರ್ಡ್ ಕೇವಲ 17 ಎಸೆತಗಳಲ್ಲಿ ಅರ್ಧಶತಕ ಪೂರೈಸಿ, ಈ ಸೀಸನ್‌ನ ಅತೀ ವೇಗದ ಹಾಫ್ ಸೆಂಚುರಿ ಬಾರಿಸಿದ ಬ್ಯಾಟರ್‌ ಆಗಿ ದಾಖಲೆ ಬರೆದಿದ್ದಾರೆ.

ಟ್ರಿನ್‌ಬಾಗೊ ನೈಟ್ ರೈಡರ್ಸ್ ಪರ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಪೊಲಾರ್ಡ್, ಗಯಾನಾ ಅಮೆಝಾನ್ ವಾರಿಯರ್ಸ್ ಬೌಲರ್‌ಗಳ ಮೇಲೆ ಆರ್ಭಟ ನಡೆಸಿದರು. ಕೇವಲ 17 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 5 ಬೌಂಡರಿಗಳ ನೆರವಿನಿಂದ ಅಜೇಯ 54 ರನ್‌ಗಳನ್ನು ಸಿಡಿಸಿ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ.

ಇದರೊಂದಿಗೆ ಪೊಲಾರ್ಡ್ CPL ಇತಿಹಾಸದಲ್ಲಿ ಅತೀ ವೇಗದ ಅರ್ಧಶತಕ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದ್ದಾರೆ. ಮೊದಲ ಸ್ಥಾನದಲ್ಲಿ 2021ರಲ್ಲಿ 14 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದ ಆಂಡ್ರೆ ರಸೆಲ್ ಇದ್ದರೆ, ದ್ವಿತೀಯ ಸ್ಥಾನದಲ್ಲಿ 15 ಎಸೆತಗಳಲ್ಲಿ ಹಾಫ್ ಸೆಂಚುರಿ ಪೂರೈಸಿದ್ದ ಜೆಪಿ ಡುಮಿನಿ ಇದ್ದಾರೆ. ಟ್ರಿನ್‌ಬಾಗೊ ಪರ ಅತೀ ವೇಗದ ಅರ್ಧಶತಕ ಸಿಡಿಸಿದ ಆಟಗಾರನ ಹೆಗ್ಗಳಿಕೆಯನ್ನು ಪೊಲಾರ್ಡ್ ಕೂಡ ಪಡೆದುಕೊಂಡಿದ್ದಾರೆ.

ಇದಕ್ಕೂ ಮುನ್ನ ಪೊಲಾರ್ಡ್ ಸತತ ಪಂದ್ಯಗಳಲ್ಲಿ ವಿಶ್ವ ದಾಖಲೆ ಬರೆದಿದ್ದರು. ಇದೀಗ ಮತ್ತೊಂದು ದಾಖಲೆ ತಮ್ಮ ಹೆಸರಿನಲ್ಲಿ ಬರೆಯುವ ಮೂಲಕ ತನ್ನ ತಾಂಡವ ಬ್ಯಾಟಿಂಗ್‌ ಪ್ರದರ್ಶನದಿಂದ CPL 2025ರಲ್ಲಿ ಹೆಚ್ಚು ಚರ್ಚೆಗೆ ಗ್ರಾಸರಾಗಿದ್ದಾರೆ.

Must Read