ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇವಲ 19ನೇ ವಯಸ್ಸಿನಲ್ಲಿ ಶತಕ ಸಿಡಿಸುವ ಮೂಲಕ ಯುವರಾಜ್ ಸಮ್ರಾ ಟಿ20 ವಿಶ್ವಕಪ್ ಇತಿಹಾಸದಲ್ಲಿ ಸೆಂಚುರಿ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಹಿಂದೆ ಪಾಕಿಸ್ತಾನದ ಅಹಮದ್ ಶೆಹಝಾದ್ (22 ವರ್ಷ) ಹೆಸರಿನಲ್ಲಿದ್ದ ದಾಖಲೆಯನ್ನು ಇವರು ಅಳಿಸಿಹಾಕಿದ್ದಾರೆ.
ಪುರುಷರ ಟಿ20 ವಿಶ್ವಕಪ್‌ನಲ್ಲಿ ಶತಕ ಸಿಡಿಸಿದ ಅಸೋಸಿಯೇಟ್ ರಾಷ್ಟ್ರದ ಮೊಟ್ಟಮೊದಲ ಬ್ಯಾಟರ್ ಎಂಬ ಕೀರ್ತಿ ಇವರಿಗೆ ಸಂದಿದೆ. ಐಸಿಸಿ ಪೂರ್ಣ ಸದಸ್ಯತ್ವ ಇಲ್ಲದ ರಾಷ್ಟ್ರವೊಂದರ ಆಟಗಾರ ಈ ಮಟ್ಟದ ಸಾಧನೆ ಮಾಡಿರುವುದು ಇದೇ ಮೊದಲು.
ಏಕದಿನ ಅಥವಾ ಟಿ20 ಈ ಎರಡೂ ಮಾದರಿಯ ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ವಿಶ್ವದ ಅತಿ ಕಿರಿಯ ಆಟಗಾರ ಎಂಬ ಬೃಹತ್ ದಾಖಲೆ ಈಗ ಯುವರಾಜ್ ಸಮ್ರಾ ಹೆಸರಿನಲ್ಲಿದೆ.
ನ್ಯೂಝಿಲೆಂಡ್ ವಿರುದ್ಧ ಕೇವಲ 65 ಎಸೆತಗಳಲ್ಲಿ 110 ರನ್ (11 ಬೌಂಡರಿ, 6 ಸಿಕ್ಸರ್) ಚಚ್ಚುವ ಮೂಲಕ, ವಿಶ್ವಕಪ್‌ನಲ್ಲಿ ಕೆನಡಾ ಪರ ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲಿಸಿದ ಆಟಗಾರ ಎನಿಸಿಕೊಂಡಿದ್ದಾರೆ.



