March 22, 2026
Sunday, March 22, 2026
spot_img

ರಾಜ-ರಾಣಿ ಲುಕ್: ವಿಜಯ್–ರಶ್ಮಿಕಾ ಮದುವೆ ಉಡುಗೆ ಡಿಸೈನ್ ಮಾಡಿದ್ಯಾರು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ವೈಭವಮಯ ಮದುವೆ ಸಮಾರಂಭದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿವೆ. ಮದುವೆ ಸಂದರ್ಭದಲ್ಲಿ ಇಬ್ಬರೂ ಧರಿಸಿದ್ದ ಉಡುಗೆಗಳು ವಿಶೇಷ ಗಮನ ಸೆಳೆದಿದ್ದು, ಡಿವೈನ್ ಲುಕ್ ಹೊಂದಿವೆ ಎಂಬ ಮೆಚ್ಚುಗೆ ವ್ಯಕ್ತವಾಗಿದೆ. ಈ ಅದ್ದೂರಿ ವಸ್ತ್ರಗಳನ್ನು ಖ್ಯಾತ ಫ್ಯಾಷನ್ ಡಿಸೈನರ್ ಅನಾಮಿಕಾ ಖನ್ನಾ ವಿನ್ಯಾಸ ಮಾಡಿದ್ದಾರೆ.

ಅನಾಮಿಕಾ ಖನ್ನಾ ಭಾರತೀಯ ಫ್ಯಾಷನ್ ಲೋಕದ ಪ್ರಮುಖ ಹೆಸರಾಗಿದ್ದಾರೆ. ಅವರ ವಿನ್ಯಾಸಗಳನ್ನು ಶಕಿರಾ, ಜೆನಿಫರ್ ಲೋಪೆಜ್, ಓಪ್ರಾ ವಿನ್‌ಫ್ರೆ, ಬಿಯಾನ್ಸೆ ಸೇರಿದಂತೆ ಅನೇಕ ಅಂತರರಾಷ್ಟ್ರೀಯ ತಾರೆಗಳು ಧರಿಸಿದ್ದಾರೆ. ಅಂಬಾನಿ ಕುಟುಂಬದ ಕಾರ್ಯಕ್ರಮಗಳಲ್ಲೂ ಅವರ ಡಿಸೈನ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಇಶಾ ಅಂಬಾನಿ ಮೆಟ್ ಗಾಲಾದಲ್ಲಿ ಧರಿಸಿದ ಉಡುಗೆಯೂ ಅನಾಮಿಕಾ ಕೃತಿ ಅವರ ಡಿಸೈನ್.

ಅನಾಮಿಕಾ ಖನ್ನಾ

1990ರಲ್ಲಿ ಸ್ವಂತ ಬ್ರ್ಯಾಂಡ್ ಆರಂಭಿಸಿದ ಅನಾಮಿಕಾ, ಭಾರತೀಯ ಶೈಲಿಯನ್ನು ಪಾಶ್ಚಾತ್ಯ ವಿನ್ಯಾಸಗಳೊಂದಿಗೆ ಸಂಯೋಜಿಸುವ ವಿಭಿನ್ನ ಶೈಲಿಗೆ ಪ್ರಸಿದ್ಧರು. ಫ್ಯಾಷನ್ ವೀಕ್‌ನಲ್ಲಿ ಕಲೆಕ್ಷನ್ ಪ್ರದರ್ಶಿಸಿದ ಮೊದಲ ಭಾರತೀಯ ಮಹಿಳಾ ಡಿಸೈನರ್ ಎನ್ನುವ ಹೆಗ್ಗಳಿಕೆಯನ್ನು ಪಡೆದಿದ್ದಾರೆ.

ಅವರ ವಿನ್ಯಾಸಗಳ ಬೆಲೆ ಲಕ್ಷಗಳಿಂದ ಕೋಟಿವರೆಗೆ ಇರಬಹುದು ಎನ್ನಲಾಗುತ್ತದೆ. ವಿಜಯ್–ರಶ್ಮಿಕಾ ಮದುವೆಯ ಉಡುಗೆಯ ನಿಖರ ಬೆಲೆ ಬಹಿರಂಗವಾಗದಿದ್ದರೂ, ಆಭರಣಗಳನ್ನು ಹೊರತುಪಡಿಸಿ ಉಡುಗೆಗಳ ಮೌಲ್ಯ ಲಕ್ಷಾಂತರ ರೂಪಾಯಿ ಆಗಿರಬಹುದು ಎಂಬ ಅಂದಾಜು ಕೇಳಿಬರುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !