ಮನೆಯ ಅಡುಗೆಮನೆಯಲ್ಲೇ ಆಗಲಿ, ಹೋಟೆಲ್ ಅಂಗಳದಲ್ಲೇ ಆಗಲಿ ದೋಸೆ ಮಾಡುವ ದೃಶ್ಯ ಎಲ್ಲರ ಗಮನ ಸೆಳೆಯೋದು ಸಾಮಾನ್ಯ. ದೊಡ್ಡ ತವೆಯನ್ನು ಬಿಸಿ ಮಾಡಿ, ಅದರ ಮೇಲೆ ನೀರು ಸಿಂಪಡಿಸಿದಾಗ ಕೇಳಿಸುವ “ಚ್ಛ್” ಎಂಬ ಶಬ್ದವೇ ದೋಸೆ ಸಿದ್ಧವಾಗುತ್ತಿರುವ ಸೂಚನೆ. ನಂತರ ತವೆಯನ್ನು ಸವರಿ ಹಿಟ್ಟನ್ನು ಹರಿಸುವ ಆ ಕ್ಷಣ ನೋಡಲು ಸಾಕಷ್ಟು ಜನ ಕಾದಿರುತ್ತಾರೆ. ಆದರೆ ಈ ಸಣ್ಣ ಕ್ರಮದ ಹಿಂದೆ ಒಂದು ಆಸಕ್ತಿದಾಯಕ ವೈಜ್ಞಾನಿಕ ವಿಷಯ ಅಡಗಿದೆ.
ತವಾ ಅತಿಯಾಗಿ ಬಿಸಿಯಾದಾಗ ಅದರ ಮೇಲೆ ನೀರು ಹನಿಗಳನ್ನು ಹಾಕಿದರೆ, ಅವು ತಕ್ಷಣವೇ ಆವಿಯಾಗುವುದಿಲ್ಲ. ಬದಲಾಗಿ ಹನಿಗಳ ಕೆಳಗೆ ಆವಿಯ ತೆಳುವಾದ ಪದರ ರೂಪುಗೊಳ್ಳುತ್ತದೆ. ಇದನ್ನೇ ‘ಲೈಡೆನ್‌ಫ್ರಾಸ್ಟ್ ಎಫೆಕ್ಟ್’ ಎಂದು ಕರೆಯುತ್ತಾರೆ. ಈ ಆವಿ ಪದರವು ನೀರನ್ನು ತವೆಯ ಮೇಲ್ಮೈಗೆ ನೇರವಾಗಿ ತಾಗದಂತೆ ತಡೆಯುತ್ತದೆ.
ಇದನ್ನೂ ಓದಿ:
ದೋಸೆ ಹಿಟ್ಟನ್ನು ಸರಿಯಾಗಿ ಹರಿಸಲು ತವೆಯ ಉಷ್ಣತೆ ನಿಯಂತ್ರಿತವಾಗಿರಬೇಕು. ತುಂಬಾ ಬಿಸಿ ಇದ್ದರೆ ಹಿಟ್ಟು ಅಂಟಿಕೊಳ್ಳುತ್ತದೆ; ಕಡಿಮೆ ಬಿಸಿ ಇದ್ದರೆ ದೋಸೆ ಗರಿಗರಿಯಾಗುವುದಿಲ್ಲ. ನೀರು ಸಿಂಪಡಿಸುವುದರಿಂದ ತಾಪಮಾನ ಸ್ವಲ್ಪ ಇಳಿದು ಸಮತೋಲನ ಸಾಧಿಸುತ್ತದೆ.
ತವೆಯನ್ನು ನೀರಿನಿಂದ ಒರೆಸಿದಾಗ ಶಾಖ ಸಮವಾಗಿ ಹಂಚಿಕೊಳ್ಳುತ್ತದೆ. ಇದರಿಂದ ದೋಸೆ ಅಂಚಿನಿಂದ ಮಧ್ಯದವರೆಗೆ ಸಮವಾಗಿ ಬೆಂದು, ಸುಂದರ ಗೋಲ್ಡನ್ ಬಣ್ಣ ಪಡೆಯುತ್ತದೆ.
ಮುಂದಿನ ಬಾರಿ ದೋಸೆ ಮಾಡುವಾಗ, ಇದು ಕೇವಲ ಅಡುಗೆ ಅಲ್ಲಇದು ಒಂದು ಚಿಕ್ಕ ವಿಜ್ಞಾನ ಪ್ರಯೋಗ ಎಂದು ನೆನಪಿಸಿಕೊಳ್ಳಿ!



