Saturday, November 22, 2025

Kitchen tips | ಅಡುಗೆಮನೆಯಲ್ಲಿರೋ ಪಾತ್ರೆಗಳಿಗೂ ಇದೆ Expiry Date!

ನಮ್ಮ ಅಡುಗೆಮನೆಯಲ್ಲಿ ಬಳಸುವ ಪಾತ್ರೆಗಳು, ಚಾಕುಗಳು, ಸ್ಪಾಂಜ್‌ಗಳು ಇವೆಲ್ಲವೂ ದಿನನಿತ್ಯದ ಕೆಲಸಕ್ಕೆ ಅಗತ್ಯ. ಆದರೆ ಒಂದೊಂದು ಪಾತ್ರೆಯೂ ಕಾಲಾಂತರದಲ್ಲಿ ತನ್ನ ಗುಣಮಟ್ಟ ಕಳೆದುಕೊಳ್ಳುತ್ತದೆ. ಅದರ ಮೇಲೆ “ಎಕ್ಸ್ಪೈರಿ ಡೇಟ್” ಬರೆಯದಿದ್ದರೂ ಸಹ, ಅವು ಹಳೆಯಾದಾಗ ಆರೋಗ್ಯಕ್ಕೆ ಅಪಾಯ ಉಂಟಾಗಬಹುದು. ಯಾವ ಪಾತ್ರೆಗಳನ್ನು ಯಾವಾಗ ಬದಲಾಯಿಸಬೇಕು ಎಂಬುದು ಅಡುಗೆ ಮಾಡುವ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ವಿಷಯ.

  • ಚಾಕುಗಳು ಮತ್ತು ಸಿಪ್ಪೆಸುಲಿಯುವ ಉಪಕರಣಗಳು: ಚಾಕು ಮೊಂಡಾದರೆ ಅಥವಾ ಹಿಡಿ ಮುರಿದರೆ ತಕ್ಷಣ ಬದಲಾಯಿಸಿ. ಮೊಂಡಾದ ಬ್ಲೇಡ್ ಗಾಯದ ಅಪಾಯ ಹೆಚ್ಚಿಸುತ್ತದೆ. ಸಿಪ್ಪೆಸುಲಿಯುವ ಉಪಕರಣಗಳನ್ನು 1–2 ವರ್ಷಗಳಿಗೊಮ್ಮೆ ಬದಲಾಯಿಸುವುದು ಉತ್ತಮ.
  • ಸ್ಪಾಂಜ್‌ಗಳು ಮತ್ತು ಸ್ಕ್ರಬ್ಬರ್‌ಗಳು: ಇವುಗಳು ಬ್ಯಾಕ್ಟೀರಿಯಾ ಜಮೆಯಾಗುವ ವೇದಿಕೆ! ವಾಸನೆ ಬರುವುದು, ಕಲೆಗಳು ಕಾಣುವುದು ಅಥವಾ ಕಳಪೆಯಾಗುವುದು ಆರಂಭವಾದರೆ ತಕ್ಷಣ ಬದಲಾಯಿಸಿ.
  • ಅಲ್ಯೂಮಿನಿಯಂ ಪಾತ್ರೆಗಳು: ಕೆಳಭಾಗ ವಿರೂಪಗೊಂಡರೆ ಅಥವಾ ಆಹಾರ ಸರಿಯಾಗಿ ಬೇಯದಿದ್ದರೆ ಹೊಸ ಪಾತ್ರೆ ಅಗತ್ಯ. ಹಳೆಯ ಅಲ್ಯೂಮಿನಿಯಂ ದೇಹದಲ್ಲಿ ಸಂಗ್ರಹವಾಗಿ ದೀರ್ಘಕಾಲದ ಕಾಯಿಲೆಯ ಅಪಾಯವನ್ನು ಹೆಚ್ಚಿಸಬಹುದು.
  • ಸಿಲಿಕೋನ್ ಸ್ಪಾಟುಲಾ ಮತ್ತು ಪ್ಲಾಸ್ಟಿಕ್ ಬೋರ್ಡ್: ಅಂಚು ಸವೆದಿದ್ದರೆ, ಬಿರುಕು ಬಂದಿದ್ದರೆ ಬದಲಾಯಿಸಿ. ಹೀಗೆ ಹಾಳಾದ ಪ್ಲಾಸ್ಟಿಕ್ ಆಹಾರಕ್ಕೆ ಮೈಕ್ರೋಪ್ಲಾಸ್ಟಿಕ್ ಸೇರಿಸಬಹುದು.
  • ಪ್ರೆಶರ್ ಕುಕ್ಕರ್ ಮತ್ತು ಗ್ಯಾಸ್ಕೆಟ್: ಕುಕ್ಕರ್‌ನ್ನು 5–8 ವರ್ಷಗಳಿಗೊಮ್ಮೆ, ಗ್ಯಾಸ್ಕೆಟ್‌ನ್ನು ಪ್ರತಿ ವರ್ಷ ಬದಲಾಯಿಸಬೇಕು. ಇಲ್ಲದಿದ್ದರೆ ದೊಡ್ಡ ಅವಘಡಕ್ಕೆ ಕಾರಣವಾಗಬಹುದು.
error: Content is protected !!