Friday, September 12, 2025

Kitchen Tips | ಫಟಾಫಟ್ ಅಂತ ಅಡುಗೆ ಮನೆ ಕ್ಲೀನ್ ಮಾಡೋದು ಹೇಗೆ?

ನಿತ್ಯ ಜೀವನದಲ್ಲಿ ಅಡುಗೆ ಮಾಡುವುದು ಎಲ್ಲರಿಗೂ ಸಹಜವಾದ ಕೆಲಸವಾದರೂ, ಅಡುಗೆಮನೆ ಸ್ವಚ್ಛಗೊಳಿಸುವುದು ಕೆಲವರಿಗೆ ತಲೆನೋವಾಗಿರುತ್ತದೆ. ಕೆಲಸದ ಒತ್ತಡದಲ್ಲಿ ಮನೆಗೆ ಬಂದು ಮತ್ತೆ ಅಡುಗೆಮನೆ ಕ್ಲೀನ್ ಮಾಡುವುದು ಸಮಯವಿಲ್ಲದ ಕೆಲಸವಾಗಿ ಕಾಣಬಹುದು. ಆದರೆ ಕೆಲವು ಸರಳ ಉಪಾಯಗಳನ್ನು ಬಳಸಿದರೆ ನಿಮ್ಮ ಅಡುಗೆಮನೆ ಹೊಳೆಯೋದು ಖಂಡಿತ.

ಕಟಿಂಗ್ ಬೋರ್ಡ್ ಕ್ಲೀನ್ ಮಾಡುವುದು

ತರಕಾರಿ ಹೆಚ್ಚಿದ ಬೋರ್ಡ್‌ಗಳಲ್ಲಿ ಕಲೆಗಳು ಅಂಟಿಕೊಂಡಿದ್ದರೆ ಉಪ್ಪು ಹಾಕಿ, ನಿಂಬೆಹಣ್ಣಿನ ಅರ್ಧ ಭಾಗದಿಂದ ಉಜ್ಜಿದರೆ ಸುಲಭವಾಗಿ ಕಲೆ ತೆಗೆಯಬಹುದು. ಪ್ಲಾಸ್ಟಿಕ್ ಬೋರ್ಡ್‌ಗಳಿಗೆ ಅಡಿಗೆ ಸೋಡಾ ಮತ್ತು ವಿನೆಗರ್ ಮಿಶ್ರಣವನ್ನು ಬಳಸಿ.

ಮಡಿಕೆ ಮತ್ತು ಹರಿವಾಣದ ಕಲೆಗಳು
ಕಠಿಣ ಕಲೆಗಳನ್ನು ತೆಗೆದುಹಾಕಲು ನಿಂಬೆ, ಅಡಿಗೆ ಸೋಡಾ ಮತ್ತು ವಿನೆಗರ್ ಮಿಶ್ರಣ ಮಾಡಿ ಹಚ್ಚಿದರೆ ಉತ್ತಮ ಫಲಿತಾಂಶ ಸಿಗುತ್ತದೆ.

ಜಿಗುಟಾದ ಪದಾರ್ಥಗಳಿಗೆ ಪರಿಹಾರ
ಜೇನುತುಪ್ಪ, ಸಿರಪ್ ಬಳಕೆ ಮಾಡುವ ಮೊದಲು ಅಳತೆ ಪಾತ್ರೆಗಳಿಗೆ ಎಣ್ಣೆ ಹಚ್ಚಿದರೆ ಜಿಗುಟು ಅಂಟುವುದಿಲ್ಲ.

ಸಿಂಕ್ ಕ್ಲೀನ್ ಮಾಡುವ ಉಪಾಯ
ಸಿಂಕ್ ಬ್ಲಾಕ್ ಆಗಿದ್ದರೆ ಅಡಿಗೆ ಸೋಡಾ ಹಾಗೂ ವಿನೆಗರ್ ಸೇರಿಸಿ ಸಿಂಕ್ ಒಳಗೆ ಹಾಕಿ 5 ನಿಮಿಷ ಬಿಟ್ಟು, ನಂತರ ಬಿಸಿನೀರು ಸುರಿದರೆ ಸಮಸ್ಯೆ ಪರಿಹಾರವಾಗುತ್ತದೆ.

ಮೈಕ್ರೋವೇವ್ ಸ್ವಚ್ಛಗೊಳಿಸುವುದು
ಮೈಕ್ರೋವೇವ್ ಕ್ಲೀನ್ ಮಾಡಲು ವಿನೆಗರ್ ಮತ್ತು ನಿಂಬೆ ಮಿಶ್ರಣವನ್ನು ಒಂದು ಬಟ್ಟಲಿನಲ್ಲಿ ಹಾಕಿ, ಒಂದು ನಿಮಿಷ ಮೈಕ್ರೋವೇವ್‌ನಲ್ಲಿ ಇಡಿ. ಬಳಿಕ ಸ್ವಚ್ಛವಾಗಿ ಒರೆಸಿ.

ಇದನ್ನೂ ಓದಿ