ಚಳಿಗಾಲ ಬಂದೊಡನೆ ಬೆಲ್ಲದ ಬಳಕೆ ಹೆಚ್ಚಾಗುತ್ತದೆ. ಚಹಾ, ಸಿಹಿ ತಿಂಡಿಗಳು, ಆಯುರ್ವೇದ ಮನೆಮದ್ದುಗಳಲ್ಲಿ ಬೆಲ್ಲಕ್ಕೆ ವಿಶೇಷ ಸ್ಥಾನವಿದೆ. ಆದರೆ ಸರಿಯಾಗಿ ಸಂಗ್ರಹಿಸದಿದ್ದರೆ ಬೆಲ್ಲದಲ್ಲಿ ನೀರಿನಂಶ ಸೇರಿ ಅದು ಕರಗುವುದು, ಕೈಗೆ ಅಂಟಿಕೊಳ್ಳುವುದು ಸಾಮಾನ್ಯ ಸಮಸ್ಯೆ. ಸ್ವಲ್ಪ ಜಾಗ್ರತೆ ವಹಿಸಿದರೆ ಈ ಸಮಸ್ಯೆಯನ್ನು ಸುಲಭವಾಗಿ ತಪ್ಪಿಸಬಹುದು.
- ಸರಿಯಾದ ಸಂಗ್ರಹಣೆ ಯಾಕೆ ಅಗತ್ಯ?: ಬೆಲ್ಲವನ್ನು ಸರಿಯಾಗಿ ಇಡದಿದ್ದರೆ ಅದರ ರುಚಿ, ಗುಣಮಟ್ಟ ಮತ್ತು ಶೆಲ್ಫ್ ಲೈಫ್ ಮೇಲೆ ಪರಿಣಾಮ ಬೀರುತ್ತದೆ. ತೇವಾಂಶ ಸೇರಿದ ಬೆಲ್ಲ ಬೇಗ ಹಾಳಾಗುವ ಸಾಧ್ಯತೆ ಹೆಚ್ಚು.
- ಸೂರ್ಯನ ಬೆಳಕಿನ ಉಪಾಯ: ಒದ್ದೆಯಾದ ಬೆಲ್ಲವನ್ನು ಸ್ವಲ್ಪ ಸಮಯ ಸೂರ್ಯನ ಬಿಸಿಲಿಗೆ ಇಟ್ಟರೆ ಅದರಲ್ಲಿರುವ ತೇವಾಂಶ ಕಡಿಮೆಯಾಗುತ್ತದೆ. ಇದು ಅಜ್ಜಿಯರ ಕಾಲದಿಂದ ಬಳಕೆಯಲ್ಲಿರುವ ಪರಿಣಾಮಕಾರಿ ವಿಧಾನ.
- ಅಕ್ಕಿ ಧಾನ್ಯಗಳ ಸಹಾಯ: ಬೆಲ್ಲದ ಡಬ್ಬದಲ್ಲಿ ಸ್ವಲ್ಪ ಅಕ್ಕಿಯನ್ನು ಹಾಕಿದರೆ, ಅವು ತೇವಾಂಶವನ್ನು ಹೀರಿಕೊಂಡು ಬೆಲ್ಲವನ್ನು ಒಣವಾಗಿರಿಸುತ್ತದೆ.
- ಬೇವಿನ ಎಲೆಗಳ ಪ್ರಯೋಜನ: ಒಣ ಬೇವಿನ ಎಲೆಗಳು ತೇವಾಂಶ ಮಾತ್ರವಲ್ಲದೆ ಸೂಕ್ಷ್ಮಜೀವಿಗಳನ್ನೂ ದೂರವಿಡುತ್ತವೆ. ಬೆಲ್ಲದ ಜೊತೆಗೆ ಇಡುವುದು ಉತ್ತಮ.
- ನೆನಪಿಟ್ಟುಕೊಳ್ಳಬೇಕಾದ ವಿಚಾರಗಳು: ಗಾಳಿಯಾಡದ ಗಾಜು ಅಥವಾ ಉಕ್ಕಿನ ಡಬ್ಬ ಬಳಸಿ. ಒದ್ದೆ ಕೈಗಳಿಂದ ಬೆಲ್ಲ ಮುಟ್ಟಬೇಡಿ. ಫ್ರಿಜ್‌ನಲ್ಲಿ ಇಡದೇ, ತಂಪಾದ ಒಣ ಜಾಗದಲ್ಲಿ ಸಂಗ್ರಹಿಸಿ.

