ಮನೆಯಲ್ಲಿ ಕೋಳಿ ಮಾಂಸ ತಂದಿದ್ರೆ ಬೇಕಾದಷ್ಟು ಮಾಡಿ ಉಳಿದರೆ ಅದನ್ನು ಫ್ರಿಡ್ಜ್‌ನಲ್ಲಿ ಇಟ್ಟು ನಂತರ ಬಳಸುವುದು ಸಾಮಾನ್ಯ. ಆದರೆ ಬೇಯಿಸಿದ ಕೋಳಿ ಮಾಂಸವನ್ನು ಎಷ್ಟು ದಿನ ಸುರಕ್ಷಿತವಾಗಿ ಇಡಬಹುದು ಎಂಬುದನ್ನು ತಿಳಿದುಕೊಳ್ಳುವುದು ತುಂಬಾ ಮುಖ್ಯ. ಸರಿಯಾದ ರೀತಿಯಲ್ಲಿ ಸ್ಟೋರ್ ಮಾಡದಿದ್ದರೆ ಅದು ಬೇಗ ಕೆಟ್ಟು ಆರೋಗ್ಯ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ.
ಎಷ್ಟು ದಿನ ಸ್ಟೋರ್ ಮಾಡಬಹುದು?
ಸಾಮಾನ್ಯವಾಗಿ ಬೇಯಿಸಿದ ಕೋಳಿ ಮಾಂಸವನ್ನು ಫ್ರಿಡ್ಜ್‌ನಲ್ಲಿ 3 ರಿಂದ 4 ದಿನಗಳವರೆಗೆ ಸುರಕ್ಷಿತವಾಗಿ ಇಡಬಹುದು. ಅದಕ್ಕಿಂತ ಹೆಚ್ಚು ದಿನ ಇಟ್ಟರೆ ರುಚಿ ಹಾಗೂ ಗುಣಮಟ್ಟ ಹಾಳಾಗುವ ಸಾಧ್ಯತೆ ಹೆಚ್ಚಾಗುತ್ತದೆ.
ಏರ್ ಟೈಟ್ ಡಬ್ಬಿಯಲ್ಲಿ ಇಡುವುದು ಮುಖ್ಯ
ಮಾಂಸವನ್ನು ತಣ್ಣಗಾದ ಬಳಿಕ ಏರ್ ಟೈಟ್ ಡಬ್ಬಿ ಅಥವಾ ಕವರ್‌ನಲ್ಲಿ ಹಾಕಿ ಫ್ರಿಡ್ಜ್‌ನಲ್ಲಿ ಇಡಬೇಕು. ಇದರಿಂದ ಅದರ ವಾಸನೆ ಮತ್ತು ತಾಜಾತನ ಕಾಪಾಡಿಕೊಳ್ಳಲು ಸಹಾಯವಾಗುತ್ತದೆ.
ಇದನ್ನೂ ಓದಿ:
ಮತ್ತೆ ತಿನ್ನುವ ಮೊದಲು ಬಿಸಿ ಮಾಡಬೇಕು
ಫ್ರಿಡ್ಜ್‌ನಿಂದ ತೆಗೆದ ಕೋಳಿ ಮಾಂಸವನ್ನು ತಿನ್ನುವ ಮೊದಲು ಚೆನ್ನಾಗಿ ಬಿಸಿ ಮಾಡಿಕೊಳ್ಳಬೇಕು. ಇದರಿಂದ ಬ್ಯಾಕ್ಟೀರಿಯಾ ಸಮಸ್ಯೆ ಕಡಿಮೆಯಾಗುತ್ತದೆ.
ವಾಸನೆ ಅಥವಾ ಬಣ್ಣ ಬದಲಾಗಿದ್ರೆ ಬೇಡ
ಮಾಂಸದಿಂದ ವಿಚಿತ್ರ ವಾಸನೆ ಬಂದರೆ ಅಥವಾ ಬಣ್ಣ ಬದಲಾಗಿದ್ರೆ ಅದನ್ನು ಬಳಸದೇ ಬಿಡುವುದು ಉತ್ತಮ.
ಫ್ರೀಜರ್‌ನಲ್ಲಿ ಇಟ್ಟರೆ ಹೆಚ್ಚು ದಿನ
ಫ್ರೀಜರ್‌ನಲ್ಲಿ ಇಟ್ಟರೆ ಬೇಯಿಸಿದ ಕೋಳಿ ಮಾಂಸವನ್ನು ಸುಮಾರು 2 ರಿಂದ 3 ತಿಂಗಳವರೆಗೆ ಕೂಡ ಸಂಗ್ರಹಿಸಬಹುದು.



