Wednesday, December 3, 2025

Kitchen tips |ಪಾಲಕ್ ಸೊಪ್ಪು ಹೆಚ್ಚು ದಿನ ಫ್ರೆಶ್ ಆಗಿರಬೇಕೆಂದ್ರೆ ಈ ರೀತಿ ಸಂಗ್ರಹಿಸಿ: ಇದೇ ನಮ್ಮಮ್ಮನ ಸೀಕ್ರೆಟ್ ಟಿಪ್ಸ್!

ಚಳಿಗಾಲ ಬಂತು ಅಂದ್ರೆ ಮಾರುಕಟ್ಟೆ ತುಂಬಾ ಹಸಿರು ಸೊಪ್ಪು ತರಕಾರಿಗಳ ಹಬ್ಬ. ಅದರಲ್ಲೂ ಪಾಲಕ್ ಸೊಪ್ಪು ಆರೋಗ್ಯದ ಖಜಾನೆ. ಆದರೆ ಮಾರುಕಟ್ಟೆಯಿಂದ ತಂದ ಎರಡು ದಿನದಲ್ಲೇ ಅದು ಕೊಳೆತು ಹೋದ್ರೆ ಏನ್ ಮಾಡೋದು. ಸ್ವಲ್ಪ ಜಾಗ್ರತೆ, ಸರಿಯಾದ ಸಂಗ್ರಹಣೆ ಮಾಡಿದರೆ ಪಾಲಕ್ ಅನ್ನು ಹೆಚ್ಚು ದಿನ ತಾಜಾ ಉಳಿಸಿಕೊಳ್ಳಬಹುದು.

ಮೊದಲು ಮಾರುಕಟ್ಟೆಯಿಂದ ತಂದ ತಕ್ಷಣ ಕೊಳೆತ ಅಥವಾ ಹಾನಿಗೊಳಗಾದ ಎಲೆಗಳನ್ನು ಬೇರ್ಪಡಿಸಬೇಕು. ಒಂದು ಹಾಳಾದ ಎಲೆಯಿಂದ ಇಡೀ ಗುಚ್ಛವೇ ಬೇಗ ಹಾಳಾಗಲು ಕಾರಣವಾಗುತ್ತದೆ. ನಂತರ ಕಾಂಡವನ್ನು ತೆಗೆದು ಸ್ವಚ್ಛವಾಗಿ ಒರೆಸಬೇಕು; ನೀರು ಉಳಿದರೆ ಬೇಗ ಕೊಳೆಯುತ್ತದೆ.

ಪಾಲಕ್ ಅನ್ನು ಅಡುಗೆ ಟವಲ್‌ನಲ್ಲಿ ಸುತ್ತಿಟ್ಟರೆ ಅದರ ತೇವಾಂಶ ಸಮತೋಲನದಲ್ಲಿರುತ್ತದೆ. ಇದರಿಂದ ಎಲೆಗಳು ಒಣಗುವುದಿಲ್ಲ, ಒಂದೇ ಸಮಯದಲ್ಲಿ ಕೊಳೆಯುವುದೂ ಕಡಿಮೆಯಾಗುತ್ತದೆ.

ಟಿಶ್ಯೂ ಪೇಪರ್ ಅಥವಾ ನ್ಯೂಸ್‌ಪೇಪರ್‌ನಲ್ಲಿ ಸುತ್ತಿಟ್ಟರೂ ಪಾಲಕ್ ಹೆಚ್ಚು ದಿನ ತಾಜಾ ಇರುತ್ತದೆ. ಪೇಪರ್ ತೇವವನ್ನು ಹೀರಿಕೊಳ್ಳುವುದರಿಂದ ಎಲೆಗಳು ಬೇಗ ಹಾಳಾಗುವುದಿಲ್ಲ.

ಅಲ್ಲದೆ ಗಾಳಿಯಾಡದ ಪಾತ್ರೆ ಅಥವಾ ಡಬ್ಬಿಯಲ್ಲಿಟ್ಟು ಮೇಲಿಂದ ಸ್ವಚ್ಛ ಬಟ್ಟೆ ಹಾಕಿ ಫ್ರಿಜ್‌ನಲ್ಲಿ ಇಟ್ಟರೆ ಪಾಲಕ್ 5–7 ದಿನಗಳವರೆಗೆ ಹಸಿರುತನ ಕಾಪಾಡಿಕೊಂಡೇ ಇರುತ್ತದೆ.

error: Content is protected !!