January17, 2026
Saturday, January 17, 2026
spot_img

Kitchen Tips | 2 ದಿನವಾದ್ರೂ ಮಾಡಿರೋ ಚಪಾತಿ ಸಾಫ್ಟ್ ಆಗಿರ್ಬೇಕಾ? ಈ ಟಿಪ್ಸ್ ಫಾಲೋ ಮಾಡಿ?

ಮನೆಮನೆಗಳಲ್ಲಿ ದಿನನಿತ್ಯ ತಯಾರಾಗುವ ಮುಖ್ಯ ಅಡುಗೆ ಪದಾರ್ಥಗಳಲ್ಲಿ ಚಪಾತಿ ಒಂದು. ಆದರೆ ಒಂದು ದಿನಕ್ಕಿಂತ ಹೆಚ್ಚು ಸಮಯ ಉಳಿಸಿಕೊಂಡರೆ ಚಪಾತಿ ಗಟ್ಟಿಯಾಗಿಬಿಡುತ್ತದೆ. ಇದರಿಂದ ತಿನ್ನಲು ರುಚಿಯಾಗುವುದಿಲ್ಲ. ವಿಶೇಷವಾಗಿ ಕೆಲಸದ ಬ್ಯುಸಿ ಸಮಯದಲ್ಲಿ ಮುಂಚಿತವಾಗಿ ಚಪಾತಿ ಮಾಡಿ ಇಟ್ಟುಕೊಳ್ಳಬೇಕಾದ ಪರಿಸ್ಥಿತಿಯಲ್ಲಿ, ಅದು ಸಾಫ್ಟ್ ಆಗಿಯೇ ಉಳಿಯಬೇಕೆಂಬುದು ಪ್ರತಿಯೊಬ್ಬರ ಆಸೆ. ಇಂತಹ ಸಂದರ್ಭಗಳಲ್ಲಿ ಕೆಲವು ಸರಳ ಟಿಪ್ಸ್‌ಗಳನ್ನು ಅನುಸರಿಸಿದರೆ, ಎರಡು ದಿನವಾದರೂ ಚಪಾತಿ ಮೃದುವಾಗಿಯೇ ಇರುತ್ತದೆ.

ಮಜ್ಜಿಗೆ ಅಥವಾ ಹಾಲು ಬಳಸಿ – ಹಿಟ್ಟಿಗೆ ನೀರಿನ ಬದಲು ಸ್ವಲ್ಪ ಮಜ್ಜಿಗೆ ಅಥವಾ ಹಾಲು ಸೇರಿಸಿ ಉಂಡೆ ಮಾಡಿದರೆ, ಚಪಾತಿ ಹೆಚ್ಚು ಕಾಲ ಸಾಫ್ಟ್ ಆಗಿರುತ್ತದೆ.

ಎಣ್ಣೆ ಅಥವಾ ತುಪ್ಪ ಸೇರಿಸಿ – ಹಿಟ್ಟಿಗೆ ಸ್ವಲ್ಪ ಎಣ್ಣೆ ಅಥವಾ ತುಪ್ಪ ಸೇರಿಸಿದರೆ, ಚಪಾತಿ ಒಣಗದೆ ಮೃದುವಾಗಿರುತ್ತದೆ.

ಹಿಟ್ಟಿಗೆ ವಿಶ್ರಾಂತಿ ನೀಡಿ – ಹಿಟ್ಟನ್ನು ಚನ್ನಾಗಿ ನಾದಿದ ಬಳಿಕ ಕನಿಷ್ಠ 30 ನಿಮಿಷ ಮುಚ್ಚಿ ಬಿಡುವುದರಿಂದ ಚಪಾತಿ ರುಚಿಯಾಗಿ ಮೃದುವಾಗಿ ತಯಾರಾಗುತ್ತದೆ.

ಮಧ್ಯಮ ಉರಿಯಲ್ಲಿ ಬೇಯಿಸಿ – ಹೆಚ್ಚು ಉರಿಯಲ್ಲಿ ಬೇಯಿಸಿದರೆ ಚಪಾತಿ ಕಠಿಣವಾಗುತ್ತದೆ. ಮಧ್ಯಮ ಉರಿಯಲ್ಲಿ ಸಮತೋಲನವಾಗಿ ಬೇಯಿಸಿದರೆ ಮೃದುವಾಗಿರುತ್ತದೆ.

ಕ್ಲಾತ್‌ನಲ್ಲಿ ಸುತ್ತಿ ಇಡಿ – ಬಿಸಿ ಬಿಸಿ ಚಪಾತಿಯನ್ನು ತಕ್ಷಣವೇ ಸ್ವಚ್ಛವಾದ ಬಟ್ಟೆಯಲ್ಲಿ ಸುತ್ತಿ ಮುಚ್ಚಿದರೆ ಅದು ಒಣಗದೆ ಸಾಫ್ಟ್ ಆಗಿರುತ್ತದೆ.

Must Read

error: Content is protected !!