March 9, 2026
Monday, March 9, 2026
spot_img

ಸಂಜು, ಶರ್ಮಾ, ಕಿಶನ್ ಸ್ಫೋಟಕ ಬ್ಯಾಟಿಂಗ್ ಗೆ ಎಡವಿದ ಕಿವೀಸ್: ಫೈನಲ್‌ ಗೆಲ್ಲಲು 256 ರನ್ ಟಾರ್ಗೆಟ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ ಸ್ಫೋಟಕ ಬ್ಯಾಟಿಂಗ್ ನಡೆಸಿ ಕಿವೀಸ್ ಗೆ ಬಿಗ್ ಟಾರ್ಗೆಟ್ ನೀಡಿದೆ.

ಟಾಪ್ 3 ಬ್ಯಾಟರ್ ಹೊಡಿಬಡಿ ಆಟದಿಂದ ಭಾರತ ತಂಡ ನ್ಯೂಜಿಲೆಂಡ್‌ಗೆ 256 ರನ್ ಟಾರ್ಗೆಟ್ ನೀಡಿದೆ.

ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಪರ ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಸತತ ಕಳಪೆ ಪ್ರದರ್ಶನದಿಂದ ಟೀಕೆಗೆ ಗುರಿಯಾಗಿದ್ದ ಅಭಿಷೇಕ್ ಶರ್ಮಾ ಫೈನಲ್ ಪಂದ್ಯದಲ್ಲಿ 18 ಎಸೆತದಲ್ಲಿ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ಅಭಿಷೇಕ್ 52 ರನ್ ಸಿಡಿಸಿ ಔಟಾದರು.

ಇಂದೆಡೆ ಸಂಜು ಸ್ಯಾಮ್ಸನ್ ಸಿಕ್ಸರ್ ಮೂಲಕ ಅಬ್ಬರಿಸುತ್ತಿದ್ದರೆ , ಇಶಾನ್ ಕಿಶನ್ ಜೊತೆಗೂಡಿದರು. ಸಂಜು ಸ್ಯಾಮ್ಸನ್ ಹ್ಯಾಟ್ರಿಕ್ ಹಾಫ್ ಸೆಂಚುರಿ ಸಿಡಿಸಿದರು. ಈ ಮೂಲಕ ಟಿ20 ವಿಶ್ವಕಪ್ ನಾಕೌಟ್ ಪಂದ್ಯದಲ್ಲಿ ಸತತ ಹಾಫ್ ಸೆಂಚುರಿ ಸಿಡಿಸಿದ ದಿಗ್ಗಜರ ಸಾಲಿಗೆ ಸೇರಿಕೊಂಡರು. ಸಂಜು ಸ್ಯಾಮನ್ಸ್ 46 ಎಸೆತದಲ್ಲಿ 89 ರನ್ ಸಿಡಿಸಿ ಔಟಾದರು.

ಇತ್ತ ಇಶಾನ್ ಕಿಶನ್ ಕೇವಲ 25 ಎಸೆತದಲ್ಲಿ 4 ಬೌಂಡರಿ ನಾಲ್ಕು ಸಿಕ್ಸರ್ ಮೂಲಕ 54 ರನ್ ಸಿಡಿಸಿ ಔಟಾದರು. ಭಾರತ 15 ಓವರ್‌ಗೆ 200 ರನ್ ಗಡಿ ದಾಟಿತ್ತು. ಆದರೆ ಇಶಾನ್ ಕಿಶನ್ ವಿಕೆಟ್ ಪತನದ ಬಳಿಕ ಭಾರತ ಸತತ ವಿಕೆಟ್ ಕಳೆದುಕೊಂಡಿತು.

ನಾಯಕ ಸೂರ್ಯಕುಮಾರ್ ಯಾದವ್ ಶೂನ್ಯಕ್ಕೆ ಔಟಾದರು. ಹಾರ್ದಿಕ್ ಪಾಂಡ್ಯ 18 ರನ್ ಸಿಡಿಸಿ ನಿರ್ಗಮಿಸಿದರು. ಅಂತಿಮ ಹಂತದಲ್ಲಿ ಶಿವಂ ದುಬೆ ಅಬ್ಬರಿಸುವ ಮೂಲಕ ಭಾರತ 250ರ ಗಡಿ ದಾಟಿತು. ದುಬೆ ಅಜೆಯ 26 ರನ್ ಸಿಡಿಸುವ ಮೂಲಕ ಭಾರತ 5 ವಿಕೆಟ್ ನಷ್ಟಕ್ಕೆ 255 ರನ್ ಸಿಡಿಸಿತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !