ಹೊಸ ದಿಗಂತ ಡಿಜಿಟಲ್ ಡೆಸ್ಕ್:
ನ್ಯೂಜಿಲ್ಯಾಂಡ್ ತಂಡ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 153 ರನ್ಗಳ ಸಾಧಾರಣ ಮೊತ್ತ ದಾಖಲಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್ ತಂಡ ಆರಂಭದಲ್ಲೇ ಆಘಾತ ಅನುಭವಿಸಿತು. ಡೆವೊನ್ ಕಾನ್ವೇ ಮೊದಲ ಓವರ್‌ನ 2ನೇ ಎಸೆತದಲ್ಲೇ ಪೆವಿಲಿಯನ್ ಸೇರಿಕೊಂಡರು. ಕಾನ್ವೇ ಎರಡು ಎಸೆತಗಳಲ್ಲಿ ಕೇವಲ ಒಂದು ರನ್ ಗಳಿಸಿ ಹರ್ಷಿತ್ ರಾಣಾ ವಿಕೆಟ್ ಒಪ್ಪಿಸಿದರು.
ನಂತರ 6ನೇ ಓವರ್ನಲ್ಲಿ ಬಂದ ಜಸ್ಪ್ರೀತ್ ಬುಮ್ರಾ ತಮ್ಮ ಓವರ್‌ನ ಮೊದಲ ಎಸೆತದಲ್ಲೇ ಟಿಮ್ ಸೀಫರ್ಟ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಸೀಫರ್ಟ್ 11 ಎಸೆತಗಳಲ್ಲಿ 12 ರನ್ ಗಳಲಷ್ಟೇ ಶಕ್ತವಾಗಿ ನಿರಾಶೆ ಮೂಡಿಸಿದರು. ಈ ಹಂತದಲ್ಲಿ ಒಂದಾದ ಗ್ಲೆನ್ ಫಿಲಿಪ್ಸ್ ಹಾಗೂ ಮಾರ್ಕ್ ಚಾಪ್ಮನ್ 52 ರನ್ಗಳ ಚೇತರಿಕೆಯ ಜೊತೆಯಾಟ ನಡೆಸಿದರು. ಚಾಪ್ಮನ್ 23 ಎಸೆತಗಳಲ್ಲಿ 32 ರನ್ ಗಳಿಸಿ ರವಿ ಬಿಷ್ಣೋಯ್ಗೆ ಬಲಿಯಾದರು.
ಡ್ಯಾರಿಲ್ ಮಿಚೆಲ್ 8 ಎಸೆತಗಳಲ್ಲಿ 14 ರನ್ ಗಳಿಸಿ ಔಟಾದರು. ಮುಂದಿನ ಓವರ್ನಲ್ಲೇ 40 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಸಹಿತ 48 ರನ್ಗಳಿಸಿದ್ದ ಫಿಲಿಪ್ಸ್ ಕೂಡ ರವಿ ಬಿಷ್ಣೋಯ್ಗೆ ವಿಕೆಟ್ ಒಪ್ಪಿಸಿದರು. ಕೈಲ್ ಜೇಮಿಸನ್ ಬುಮ್ರಾ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆದರು, ಮ್ಯಾಟ್ ಹೆನ್ರಿ ಕೇವಲ 1 ರನ್ಗಳಿಸಿ ರನ್ಔಟ್ ಆದರು.
ಕೊನೆಯಲ್ಲಿ ಒಂದೆರಡು ಅದ್ಭುತ ಹೊಡೆತಗಳ ಮೂಲಕ ಮಿಂಚಿದ ನಾಯಕ ಮಿಚೆಲ್ ಸ್ಯಾಂಟ್ನರ್ 17 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಮೂಲಕ 27 ರನ್ಗಳಿಸಿ ತಂಡದ ಮೊತ್ತ 150ರ ಗಡಿ ದಾಟಲು ನೆರವಾದರು. ಇಶ್ ಸೋಧಿ ಅಜೇಯ 2, ಡಫಿ ಅಜೇಯ 4 ರನ್ಗಳಿಸಿದರು.




