Wednesday, January 14, 2026
Wednesday, January 14, 2026
spot_img

ಲಿವರ್-ಜೀರ್ಣಕ್ರಿಯೆ ಆರೋಗ್ಯದ ಕುರಿತು ಕೆಎಂಸಿಯಿಂದ ಜಾಗೃತಿ ಕಾರ್ಯಕ್ರಮ ಆಯೋಜನೆ

ಮಂಗಳೂರು:

ಗ್ಯಾಸ್ಟ್ರೋಎಂಟರಾಲಜಿ ಸೇವೆಗಳಲ್ಲಿ 25 ವರ್ಷಗಳ ಶ್ರೇಷ್ಠತೆ ಸ್ಮರಿಸಲು ಇದೇ ತಿಂಗಳ 13ರ ಶನಿವಾರದಂದು, ಮಧ್ಯಾಹ್ನ 3.30ರಿಂದ ಮಂಗಳೂರಿನ ಡಾ. ಬಿ ಆರ್‍ ಅಂಬೇಡ್ಕರ್‍ ವೃತ್ತದಲ್ಲಿನ ಕೆಎಂಸಿ ಆಸ್ಪತ್ರೆಯ ನೆಲ ಮಹಡಿ, ಟವರ್ 2 ರಲ್ಲಿ ಸಾರ್ವಜನಿಕ ಜಾಗೃತಿ ಕಾರ್ಯಕ್ರಮವನ್ನು ಮಂಗಳೂರಿನ ಕೆಎಂಸಿ ಆಸ್ಪತ್ರೆ ಆಯೋಜಿಸಿದೆ.

ಕೂಡಲೇ ನೋಂದಾಯಿಸಿಕೊಳ್ಳಿ
ಈ ಕಾರ್ಯಕ್ರಮದಲ್ಲಿ ಜೀರ್ಣಾಂಗ ವ್ಯವಸ್ಥೆಯ ಆರೋಗ್ಯ ಮತ್ತು ಜೀವನಶೈಲಿಯ ಆಯ್ಕೆಗಳ ಪ್ರಮುಖ ಅಂಶಗಳ ಬಗ್ಗೆ ಸಮುದಾಯಕ್ಕೆ ಶಿಕ್ಷಣ ನೀಡಲಾಗುವುದು. ಈ ಮಾಹಿತಿಯು ಕರುಳು, ಯಕೃತ್ತು ಮತ್ತು ಒಟ್ಟಾರೆ ಯೋಗಕ್ಷೇಮದ ಮೇಲೆ ನೇರವಾಗಿ ಸಕಾರಾತ್ಮಕ ಪರಿಣಾಮ ಬೀರಲಿದೆ. ಈ ಕಾರ್ಯಕ್ರಮವು ಪೋಷಕರು, ಗೃಹಿಣಿ ಯರು, ಮದ್ಯ ಸೇವಿಸುವ ವ್ಯಕ್ತಿಗಳು ಮತ್ತು ಅವರ ಕುಟುಂಬಗಳು, ಬೊಜ್ಜು ಅಥವಾ ಮಧುಮೇಹದ ಅಪಾಯದಲ್ಲಿರುವವರು ಮತ್ತು ಹಿರಿಯ ನಾಗರಿಕರಿಗೆ ವಿಶೇಷವಾಗಿದೆ. 9008167071 ಗೆ ಕರೆ ಮಾಡಿ ತಮ್ಮ ಹೆಸರನ್ನು ಕಳುಹಿಸುವ ಮೂಲಕ ತಮ್ಮನ್ನು ನೋಂದಾಯಿಸಿಕೊಳ್ಳುವಂತೆ ನಾವು ಸಾರ್ವಜನಿಕರನ್ನು ಕೋರುತ್ತೇವೆ. ನೋಂದಣಿ ಉಚಿತ ಆದರೆ ಕಡ್ಡಾಯವಾಗಿರುತ್ತದೆ.

ಈ ಕಾರ್ಯಕ್ರಮದಲ್ಲಿ ಆಧುನಿಕ ಸಂಶ್ಲೇಷಿತ ಮತ್ತು ಸಂಸ್ಕರಿಸಿದ ಆಹಾರಗಳು, ಕರುಳು ಮತ್ತು ಯಕೃತ್ತಿನ ಮೇಲೆ ಬೀರುವ ಪರಿಣಾಮ, ಸ್ವಯಂ ಸೂಚಿಸಿದ ಅಥವಾ ಓವರ್-ದಿ-ಕೌಂಟರ್ ನೋವು ನಿವಾರಕಗಳ ಅಪಾಯ ಗಳು ಮತ್ತು ಪ್ರಯೋಜನಗಳು ಮತ್ತು ಮಕ್ಕಳು ಮತ್ತು ಹದಿಹರೆಯದವರಲ್ಲಿ ಫ್ಯಾಟಿ ಲಿವರ್ ಮತ್ತು ಸ್ಥೂಲಕಾಯತೆ ರೋಗದಂತಹ ಪ್ರಮುಖ ವಿಷಯಗಳ ಕುರಿತಾದ ಚರ್ಚೆ ಒಳಗೊಂಡಿದೆ.

ವೈದ್ಯರ ಜೊತೆ ಚರ್ಚೆಗೆ ಅವಕಾಶ
ನಂತರ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಹಿರಿಯ ವೈದ್ಯರು ಮತ್ತು ತಜ್ಞರೊಂದಿಗೆ ಸಂವಾದ ಮತ್ತು ಪ್ರಶ್ನೋತ್ತರಕ್ಕೆ ಕೂಡ ಅವಕಾಶವಿದ್ದು, ತಮ್ಮ ಕಾಳಜಿ ಕುರಿತಾದ ಅರಿವು ಮತ್ತು ಪ್ರಾಯೋಗಿಕ ಆರೋಗ್ಯ ಸಲಹೆಗಳ ಪಡೆಯಲು ಅವಕಾಶ ನೀಡಲಾಗುತ್ತದೆ. ಇದರ ಜೊತೆಗೆ, ಸಾರ್ವಜನಿಕರು ತಮ್ಮ ದೈನಂದಿನ ದಿನಚರಿ ಯಲ್ಲಿ ಅಳವಡಿಸಿಕೊಳ್ಳುವ ದೃಷ್ಟಿಯಿಂದ ಸರಳ ಪಾಕವಿಧಾನಗಳೊಂದಿಗೆ ಕರುಳಿಗೆ ಅನುಕೂಲ ಕರ ವಾದ, ಪೌಷ್ಟಿಕವಾದ ಮನೆಯಲ್ಲಿ ತಯಾರಿಸಿದ ತಿಂಡಿಗಳ ಪ್ರದರ್ಶನ ಇರುವುದು.

ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿ ವಿಭಾಗದ ಮುಖ್ಯಸ್ಥ ಡಾ.ಬಿ.ವಿ.ತಂತ್ರಿ ಮಾತನಾಡಿ, “ವಯಸ್ಕರು ಮತ್ತು ಮಕ್ಕಳಲ್ಲಿ ಜೀವನಶೈಲಿಯ ಬದಲಾವಣೆಗಳು, ಆಹಾರ ಪದ್ಧತಿಗಳು ಮತ್ತು ಹೆಚ್ಚುತ್ತಿರುವ ಬೊಜ್ಜುತನಕ್ಕೆ ಸಂಬಂಧಿಸಿ ಜೀರ್ಣಕ್ರಿಯೆ ಅಸ್ವಸ್ಥತೆಗಳಲ್ಲಿ ಸ್ಥಿರ ಏರಿಕೆಯನ್ನು ನಾವು ವರ್ಷಗಳಲ್ಲಿ ಕಂಡಿದ್ದೇವೆ. ನಮ್ಮ ವಿಭಾಗವು ಸುಧಾರಿತ ತಂತ್ರಜ್ಞಾನ ಮತ್ತು ವೈದ್ಯಕೀಯ ಪರಿಣತಿ ಪಡೆದು ಬೆಳೆದಿದ್ದರೂ, ನೀಡುವ ಚಿಕಿತ್ಸೆಯಷ್ಟೇ, ತಡೆಗಟ್ಟುವಿಕೆ ಮತ್ತು ಜಾಗೃತಿಯು ಮುಖ್ಯ ಎಂದು ನಾವು ನಂಬುತ್ತೇವೆ. ಈ ಕಾರ್ಯಕ್ರಮದ ಮೂಲಕ, ದೈನಂದಿನ ಅಭ್ಯಾಸಗಳು ಜೀರ್ಣಕಾರಿ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದರ ಕುರಿತು ಸಮುದಾಯಕ್ಕೆ ಶಿಕ್ಷಣ ನೀಡುವುದು ಮತ್ತು ಆರೋಗ್ಯಕರ ಜೀವನಕ್ಕೆ ಪೂರ್ವಭಾವಿ ಕ್ರಮಗಳನ್ನು ಪ್ರೋತ್ಸಾಹಿಸುವುದು ನಮ್ಮ ಗುರಿಯಾಗಿದೆ” ಎಂದು ಹೇಳಿದರು.

ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಪ್ರಾದೇಶಿಕ ಮುಖ್ಯ ಕಾರ್ಯಾನಿರ್ವಹಣಾ ಅಧಿಕಾರಿ ಸಾಘೀರ್ ಸಿದ್ಧಿಕಿ ಮಾತನಾಡಿ, “ಕಳೆದ 25 ವರ್ಷಗಳಲ್ಲಿ, ನಮ್ಮ ವಿಭಾಗವು ಕ್ಲಿನಿಕಲ್ ಆರೈಕೆ ಮತ್ತು ತಂತ್ರಜ್ಞಾನದಲ್ಲಿ ಮುಂದುವರೆದಿದೆ. ಜೊತೆಗೆ ಆರೋಗ್ಯ ರಕ್ಷಣೆ ವಿಚಾರದಲ್ಲಿ ಜಾಗೃತಿ ಮೂಡಿಸಲು ಬದ್ಧವಾಗಿದೆ. ಜೀವನಶೈಲಿ ಮತ್ತು ಆಹಾರ ಪದ್ಧತಿಗಳು ಎಲ್ಲಾ ವಯೋಮಾನದವರಲ್ಲಿ ಜೀರ್ಣಕಾರಿ ಆರೋಗ್ಯದ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎಂಬುದನ್ನು ಎತ್ತಿ ತೋರಿಸುತ್ತದೆ. ಈ ನಿಟ್ಟಿನಲ್ಲಿ ಸಮುದಾಯವನ್ನು ತಲುಪಲು ಕಾರ್ಯಕ್ರಮವು ಒಂದು ಮಾರ್ಗವಾಗಿದೆ ” ಎಂದು ಅಭಿಪ್ರಾಯಪಟ್ಟರು.

ಆರೋಗ್ಯ ರಕ್ಷಣೆಯಲ್ಲಿ ಪ್ರಾದೇಶಿಕ ನಾಯಕನಾಗಿ ಕೆಎಂಸಿ ಆಸ್ಪತ್ರೆಯು ಖ್ಯಾತಿ ಪಡೆದದೆ. ಸಮಗ್ರ ಆರೋಗ್ಯ ಮತ್ತು ಯೋಗಕ್ಷೇಮ ಉತ್ತೇಜಿಸುವ ತನ್ನ ಧ್ಯೇಯದ ಭಾಗವಾಗಿ, ಈ ಕಾರ್ಯಕ್ರಮಕ್ಕೆ ಹಾಜರಾಗಲು ಮತ್ತು ಪ್ರಯೋಜನ ಪಡೆಯಲು ಆಸ್ಪತ್ರೆಯು ಸಾರ್ವಜನಿಕರನ್ನು ಆಹ್ವಾನಿಸುತ್ತದೆ.

Most Read

error: Content is protected !!