March 24, 2026
Tuesday, March 24, 2026
spot_img

ಆರ್‌ಸಿಬಿ ಜತೆ ಕೆಎಂಎಫ್‌ ಒಪ್ಪಂದ: ಇನ್ಮುಂದೆ ನಂದಿನಿ ಉತ್ಪನ್ನಗಳ ಪ್ರಚಾರ ಮಾಡ್ತಾರೆ ಕೊಹ್ಲಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ ಅಬ್ಬರ ಶುರುವಾಗಲು ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಇದರ ನಡುವೆ ಕೆಎಂಎಫ್‌ ನಂದಿನಿ ತನ್ನ ಉತ್ಪನ್ನಗಳ ಪ್ರಚಾರಕ್ಕೆ ಆರ್‌ಸಿಬಿ ತಂಡದ ಜತೆ ಒಪ್ಪಂದ ಮಾಡಿಕೊಂಡಿದೆ.

ಜಾಗತಿಕ ಮಟ್ಟದಲ್ಲಿ ಸ್ಥಳೀಯ ಉತ್ಪನ್ನ ನಂದಿನಿಯನ್ನು ಮತ್ತಷ್ಟು ಗುರುತಿಸುವಂತೆ ಮಾಡುವ ಉದ್ದೇಶದಿಂದ ಆರ್‌ಸಿಬಿಯನ್ನು ಅಧಿಕೃತ ಪಾಲುದಾರನಾಗಿ ಮಾಡಲಾಗಿದೆ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರಾದ ಬಿ. ಶಿವಸ್ವಾಮಿ ತಿಳಿಸಿದ್ದಾರೆ.

ಮುಂದಿನ ಒಂದು ವರ್ಷಗಳ ಕಾಲ ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ದೇವದತ್ತ ಪಡಿಕಲ್ ಅವರು ನಂದಿನಿ ಉತ್ಪನ್ನಗಳ ಕುರಿತು ಪ್ರಚಾರ ನೀಡಲಿದ್ದು, ಇದಕ್ಕಾಗಿ ಕೆಎಂಎಫ್‌ 4 ಕೋಟಿ ರೂ. ಖರ್ಚು ಮಾಡಿದೆ.


ಆರ್‌ಸಿಬಿ ತಂಡವನ್ನು ಯುವಜನತೆ ಅಧಿಕವಾಗಿ ಮೆಚ್ಚಿದ್ದು, ಅದೇ ರೀತಿ ನಂದಿನಿ ಉತ್ಪನ್ನಗಳಿಗೂ ಸದಾ ಪ್ರೋತ್ಸಾಹ ನೀಡುತ್ತಿದ್ದಾರೆ. ಹೀಗಾಗಿ ಇವು ಎರಡು ಜೊತೆಯಾಗಿರುವುದು ಖುಷಿಯ ವಿಚಾರವಾಗಿದೆ ಎಂದು ಶಿವಸ್ವಾಮಿ ತಿಳಿಸಿದ್ದಾರೆ.

ಟಿ೦ವಿಶ್ವಕಪ್ ಸಮಯದಲ್ಲಿ ಐರ್ಲೆಂಡ್ ಮತ್ತು ಸ್ಕಾಟ್ಲೆಂಡ್ ಕ್ರಿಕೆಟ್ ತಂಡಗಳಿಗೆ ಪ್ರಾಯೋಜಕತ್ವ ನೀಡಿದ್ದ ನಂದಿನಿ, ರಾಜ್ಯದ ಆರ್‌ಸಿಬಿ ತಂಡಕ್ಕೆ ಬೆಂಬಲ ನೀಡುತ್ತಿರುವುದು ಅಭಿಮಾನಿಗಳಲ್ಲಿ ಖುಷಿ ತಂದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !