ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಜಯ ಹಝಾರೆ ಟೂರ್ನಿಯ ಗ್ರೂಪ್-ಡಿ ಪಂದ್ಯದಲ್ಲಿ ದೆಹಲಿ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಕಣಕ್ಕಿಳಿಯದಿರುವುದು ಕ್ರಿಕೆಟ್ ಪ್ರೇಮಿಗಳಿಗೆ ನಿರಾಸೆ ಮೂಡಿಸಿದೆ. ಆರಂಭದಲ್ಲಿ ಜನವರಿ 6 ರಂದು ರೈಲ್ವೇಸ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಆಲೂರು ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಅವರು ಹಿಂದೆಸರಿದಿದ್ದಾರೆ.
ಜನವರಿ 11 ರಿಂದ ಆರಂಭವಾಗಲಿರುವ ಭಾರತ–ನ್ಯೂಝಿಲೆಂಡ್ ಏಕದಿನ ಸರಣಿಗೆ ತಯಾರಿ ನಡೆಸಲಿರುವ ಕಾರಣದಿಂದ ರೈಲ್ವೇಸ್ ವಿರುದ್ಧದ ಪಂದ್ಯ ದಿಂದ ಕೊಹ್ಲಿ ಹಿಂದೆಸರಿದಿದ್ದಾರೆ. ಅವರು ಜನವರಿ 7 ರಂದು ಬರೋಡಾದಲ್ಲಿ ಭಾರತ ತಂಡ ಸೇರಲಿದ್ದಾರೆ. ಮುಂಚಿನ ಪಂದ್ಯಗಳಲ್ಲಿ ಕೊಹ್ಲಿ ಬೆಂಗಳೂರು ಸಿಇಒ ಮೈದಾನದಲ್ಲಿ ಆಂಧ್ರ ವಿರುದ್ಧ 131 ರನ್, ಗುಜರಾತ್ ವಿರುದ್ಧ 77 ರನ್ ಸಿಡಿಸಿ ತಮ್ಮ ಫಾರ್ಮ್ ಅನ್ನು ತೋರಿಸಿದ್ದರು.
ಇದನ್ನೂ ಓದಿ: Fake Honey | ನೀವು ಬಳಸೋ ಜೇನುತುಪ್ಪ ಅಸಲಿನಾ? ಕಂಡುಹಿಡಿಬೇಕಾ? ಈ ರೀತಿ ಟೆಸ್ಟ್ ಮಾಡಿ
ಇದೀಗ, ನ್ಯೂಝಿಲೆಂಡ್ ವಿರುದ್ಧದ ಸರಣಿಗೆ ಆಯ್ಕೆಯಾಗಿರುವ ರಿಷಭ್ ಪಂತ್ ರೈಲ್ವೇಸ್ ವಿರುದ್ಧದ ಪಂದ್ಯದಲ್ಲೂ ನಾಯಕನಾಗಿ ಕಣಕ್ಕಿಳಿದಿದ್ದಾರೆ. ಈ ಮ್ಯಾಚ್ ಮುಗಿದ ಬಳಿಕ ಪಂತ್ ಭಾರತ ತಂಡ ಸೇರಿಕೊಳ್ಳಲಿದ್ದಾರೆ.

