Friday, December 26, 2025

ವಿಜಯ್ ಹಜಾರೆ ಟ್ರೋಫಿಯಲ್ಲಿ ಮಿಂಚಿದ ಕೊಹ್ಲಿ: BCCIನಿಂದ ಸಿಕ್ತು ಗಿಫ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಸಿಸಿಐ ಸೂಚನೆಯಂತೆ ದೇಶಿ ಟೂರ್ನಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಪಾಲ್ಗೊಂಡ ವಿರಾಟ್ ಕೊಹ್ಲಿ, ಆಡಿದ ಎರಡು ಪಂದ್ಯಗಳಲ್ಲೂ ಅದ್ಭುತ ಪ್ರದರ್ಶನ ನೀಡಿ ತಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಮೊದಲ ಪಂದ್ಯದಲ್ಲಿ ಶತಕ ಬಾರಿಸಿದ್ದ ಕೊಹ್ಲಿ, ಗುಜರಾತ್ ವಿರುದ್ಧದ ಎರಡನೇ ಪಂದ್ಯದಲ್ಲಿ 77 ರನ್‌ಗಳ ಜವಾಬ್ದಾರಿಯುತ ಇನ್ನಿಂಗ್ಸ್‌ ಆಡಿದರು. ಅವರ ಈ ಆಟದ ನೆರವಿನಿಂದ ದೆಹಲಿ ತಂಡ 7 ರನ್‌ಗಳ ರೋಚಕ ಜಯ ಸಾಧಿಸಿ, ಟೂರ್ನಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿತು.

ಈ ಪಂದ್ಯದಲ್ಲಿ ಕೊಹ್ಲಿ 61 ಎಸೆತಗಳಲ್ಲಿ 13 ಬೌಂಡರಿ ಹಾಗೂ ಒಂದು ಸಿಕ್ಸರ್‌ ಸಹಿತ 77 ರನ್‌ ಗಳಿಸಿದರು. ಡೆಹಲಿ ತಂಡ 50 ಓವರ್‌ಗಳಲ್ಲಿ 254 ರನ್‌ಗಳ ಗುರಿ ನಿಗದಿಪಡಿಸಿತು. ಪ್ರತಿಯಾಗಿ ಗುಜರಾತ್ ತಂಡ 247 ರನ್‌ಗಳಿಗೆ ಸೀಮಿತವಾಗಿ ಸೋಲಪ್ಪಿಕೊಂಡಿತು. ತಂಡದ ಗೆಲುವಿಗೆ ಮಹತ್ವದ ಪಾತ್ರವಹಿಸಿದ್ದ ಕೊಹ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಪಾತ್ರರಾದರು.

ಇದನ್ನೂ ಓದಿ:

ಪಂದ್ಯಶ್ರೇಷ್ಠ ಪ್ರಶಸ್ತಿಯಾಗಿ ಅವರಿಗೆ 10 ಸಾವಿರ ರೂಪಾಯಿ ಬಹುಮಾನ ನೀಡಲಾಗಿದ್ದು, ಇದನ್ನು ಡಿಡಿಸಿಎ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಈ ಮೊತ್ತದ ಬಗ್ಗೆ ಅಭಿಮಾನಿಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಆದರೆ ವಿಜಯ್ ಹಜಾರೆ ಲೀಗ್ ಪಂದ್ಯಗಳಲ್ಲಿ ಇದೇ ನಿಗದಿತ ಬಹುಮಾನ ಎಂಬುದು ಸ್ಪಷ್ಟವಾಗಿದೆ.

ಆಂಧ್ರಪ್ರದೇಶ ವಿರುದ್ಧ 131 ಹಾಗೂ ಗುಜರಾತ್ ವಿರುದ್ಧ 77 ರನ್‌ಗಳೊಂದಿಗೆ, ಕೊಹ್ಲಿ ಎರಡು ಪಂದ್ಯಗಳಲ್ಲಿ ಒಟ್ಟು 208 ರನ್‌ ಕಲೆಹಾಕಿದ್ದಾರೆ. ಈ ಮೂಲಕ ವಿಜಯ್ ಹಜಾರೆ ಟ್ರೋಫಿಯಲ್ಲಿ 1,000 ರನ್‌ಗಳ ಮೈಲಿಗಲ್ಲನ್ನೂ ತಲುಪಿದ್ದಾರೆ.

error: Content is protected !!