ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದ ಆನಂದಪುರದ ಗೋದಾಮಿನಲ್ಲಿ ಬೆಂಕಿ ಅವಘಡದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಪ್ರಧಾನಿ ನರೇಂದ್ರ ಮೋದಿ ಇಂದು 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಅಲ್ಲದೆ, ಗಾಯಗೊಂಡವರಿಗೆ ಪ್ರಧಾನಿ ಮೋದಿ 50,000 ರೂ. ಪರಿಹಾರ ಘೋಷಿಸಿದ್ದಾರೆ.
ಆನಂದಪುರದಲ್ಲಿ ಇತ್ತೀಚೆಗೆ ಸಂಭವಿಸಿದ ಬೆಂಕಿ ಅವಘಡವು ತುಂಬಾ ದುರಂತ ಮತ್ತು ದುಃಖಕರವಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ನನ್ನ ಸಂತಾಪಗಳು. ಗಾಯಗೊಂಡವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಪುಷ್ಪಾಂಜಲಿ ಡೆಕೋರೇಟರ್ಸ್ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡಿತು. ಅದು ವಾವ್ ಮೊಮೊ! ನಿರ್ವಹಿಸುತ್ತಿದ್ದ ಪಕ್ಕದ ಗೋದಾಮಿಗೆ ಬೇಗನೆ ಹರಡಿ, ಎರಡೂ ಕಟ್ಟಡಗಳನ್ನು ಆವರಿಸಿತು. ಈ ಬೆಂಕಿ ಅವಘಡದಲ್ಲಿ ಇದುವರೆಗೆ 25 ಜನರು ಸಾವನ್ನಪ್ಪಿದ್ದಾರೆ. ಕೋಲ್ಕತ್ತಾ ಪೊಲೀಸರು ವಾವ್ ಮೊಮೊ! ಗೋದಾಮಿನ ವ್ಯವಸ್ಥಾಪಕ ರಾಜ ಚಕ್ರವರ್ತಿ ಮತ್ತು ಉಪ ವ್ಯವಸ್ಥಾಪಕ ಮನೋರಂಜನ್ ಶೀತ್ವ್ ಅವರನ್ನು ಬಂಧಿಸಿದ್ದಾರೆ..



