April 6, 2026
Monday, April 6, 2026
spot_img

ಕೊರಿಯನ್ಸ್ ಗೂ ನಮ್ಮ ಇಂಡಿಯನ್ ಸಿನಿಮಾ ಅಂದ್ರೆ ಇಷ್ಟ ಕಣ್ರೀ: ‘ಕೆಜಿಎಫ್’ ನೋಡಿ ಮೆಚ್ಚಿದ ನಟ ವಿ ಹಾ ಜುನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೊರಿಯನ್ ಸಿನಿಮಾಗಳು ಮತ್ತು ವೆಬ್‌ಸಿರೀಸ್‌ಗಳು ವಿಶ್ವದಾದ್ಯಂತ ಅಪಾರ ಜನಪ್ರಿಯತೆ ಗಳಿಸುತ್ತಿರುವ ಸಂದರ್ಭದಲ್ಲಿ, ಕೊರಿಯಾದ ಖ್ಯಾತ ನಟ ವಿ ಹಾ ಜುನ್ ಭಾರತೀಯ ಸಿನಿಮಾಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಸ್ಕ್ವಿಡ್ ಗೇಮ್’, ‘ದಿ ಚೇಸ್’, ‘ಮಿಡ್‌ನೈಟ್’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ವಿ ಹಾ ಜುನ್ ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ ವೇಳೆ ಭಾರತೀಯ ಚಿತ್ರಗಳ ಕುರಿತು ಮಾತನಾಡಿದರು. ವಿಶೇಷವಾಗಿ ಕನ್ನಡದ ‘ಕೆಜಿಎಫ್’ ಸಿನಿಮಾವನ್ನು ವಿಶೇಷವಾಗಿ ಉಲ್ಲೇಖಿಸಿ ಪ್ರಶಂಸಿಸಿದರು.

ಕೆಲ ಭಾರತೀಯ ಸಿನಿಮಾಗಳನ್ನು ನೋಡಿರುವುದಾಗಿ ಹೇಳಿದ ವಿ ಹಾ ಜುನ್, ‘ಕೆಜಿಎಫ್’ ಒಂದು ಅದ್ಭುತ ಹಾಗೂ ಭಾರೀ ಸ್ಕೇಲ್‌ನ ಆಕ್ಷನ್ ಸಿನಿಮಾ ಎಂದು ಹೇಳಿದರು. ಅದರಲ್ಲಿರುವ ತೀವ್ರವಾದ ಆಕ್ಷನ್ ದೃಶ್ಯಗಳು ಹಾಗೂ ಕಥಾಹಂದರ ಪ್ರೇಕ್ಷಕರನ್ನು ಕುರ್ಚಿಯ ತುದಿಯಲ್ಲಿ ಕುಳ್ಳಿರಿಸುವಂತಿವೆ ಎಂದು ಅವರು ಅಭಿಪ್ರಾಯಪಟ್ಟರು.

ಇದನ್ನೂ ಓದಿ:

ಜೊತೆಗೆ ಭಾರತೀಯ ಸಿನೆಮಾದಲ್ಲಿ ವಿಶ್ವದಾದ್ಯಂತ ಖ್ಯಾತಿ ಪಡೆದ ‘3 ಇಡಿಯಟ್ಸ್’ ಸಿನಿಮಾವನ್ನೂ ಅವರು ಮೆಚ್ಚುಗೆ ಸೂಚಿಸಿ, ಮನರಂಜನೆಯ ಜೊತೆಗೆ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಚಿತ್ರ ಎಂದು ಶ್ಲಾಘಿಸಿದರು.

ಒಮ್ಮೆ ಕರ್ನಾಟಕದ ಗಡಿ ದಾಟದಿದ್ದ ಕನ್ನಡ ಸಿನಿಮಾಗಳು ಈಗ ವಿಶ್ವದ ಮಟ್ಟದಲ್ಲಿ ಗುರುತಿಸಿಕೊಂಡಿವೆ. ‘ಕೆಜಿಎಫ್’ ಚಿತ್ರದ ಮೂಲಕ ಯಶ್ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಕನ್ನಡ ಚಿತ್ರರಂಗಕ್ಕೆ ಜಾಗತಿಕ ಗಮನ ತಂದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !