ಹೊಸದಿಗಂತ ಡಿಜಿಟಲ್ ಡೆಸ್ಕ್:
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಆಗುವ ಅನನುಕೂಲವನ್ನು ತಪ್ಪಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಭರ್ಜರಿ ಸಿದ್ಧತೆ ನಡೆಸಿದೆ. ಹಬ್ಬಕ್ಕಾಗಿ ಊರಿಗೆ ತೆರಳುವ ಲಕ್ಷಾಂತರ ಪ್ರಯಾಣಿಕರ ಅನುಕೂಲಕ್ಕಾಗಿ 2500 ಹೆಚ್ಚುವರಿ ಬಸ್‌ಗಳನ್ನು ಕಾರ್ಯಾಚರಣೆಗೆ ಇಳಿಸಲು KSRTC ನಿರ್ಧರಿಸಿದೆ.
ಈ ವಿಶೇಷ ಬಸ್‌ಗಳು ಅಕ್ಟೋಬರ್ 17 ರಿಂದ 20 ರವರೆಗೆ ರಾಜ್ಯಾದ್ಯಂತ ಸಂಚಾರ ನಡೆಸಲಿವೆ. ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಸಾಮಾನ್ಯ ಸಾರಿಗೆ, ಐರಾವತ, ಸ್ಲೀಪರ್ ಕೋಚ್ ಸೇರಿದಂತೆ ಎಲ್ಲ ವಿಧದ ಐಷಾರಾಮಿ ಬಸ್‌ಗಳ ಸೇವೆ ಲಭ್ಯವಿರುತ್ತದೆ.
ವಿಶೇಷ ಬಸ್ಸುಗಳ ಸಂಚಾರ ವ್ಯವಸ್ಥೆ:
ಬೆಂಗಳೂರಿನ ಪ್ರಮುಖ ಬಸ್ ನಿಲ್ದಾಣಗಳಿಂದ ರಾಜ್ಯದ ಹಾಗೂ ಅಂತರರಾಜ್ಯದ ವಿವಿಧ ಭಾಗಗಳಿಗೆ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ.
ಹಬ್ಬದ ಬಳಿಕವೂ ಇದೆ ವಿಶೇಷ ಸೌಲಭ್ಯ!
ಹಬ್ಬ ಮುಗಿಸಿ ವಾಪಸ್ ಬರುವ ಪ್ರಯಾಣಿಕರಿಗೂ KSRTC ಉತ್ತಮ ಸೌಲಭ್ಯ ಒದಗಿಸಿದೆ. ಸೆಪ್ಟೆಂಬರ್ 22 ಮತ್ತು 26 ರಂದು ಬೆಂಗಳೂರಿಗೆ ಮರಳುವ ಪ್ರಯಾಣಿಕರಿಗಾಗಿ ವಿಶೇಷ ಬಸ್‌ಗಳ ಕಾರ್ಯಾಚರಣೆ ಮುಂದುವರಿಯಲಿದೆ.
ಪ್ರಯಾಣಿಕರು ಮುಂಚಿತವಾಗಿ ಟಿಕೆಟ್ ಕಾಯ್ದಿರಿಸಿದರೆ ರಿಯಾಯಿತಿ ಕೂಡ ಲಭ್ಯವಿದೆ:
ಮುಂಗಡವಾಗಿ ಸೀಟ್ ಬುಕ್ ಮಾಡಿದರೆ 5% ರಿಯಾಯಿತಿ.
ಹೋಗುವ ಮತ್ತು ಬರುವ ಎರಡೂ ಬದಿಯ ಟಿಕೆಟ್‌ಗಳನ್ನು ಏಕಕಾಲಕ್ಕೆ ಬುಕ್ ಮಾಡಿದರೆ 10% ರಿಯಾಯಿತಿ ಆಫರ್ ಇರುತ್ತದೆ.
ಪ್ರಯಾಣಿಕರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವಂತೆ KSRTC ಪ್ರಕಟಣೆಯಲ್ಲಿ ತಿಳಿಸಿದೆ.

