ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಗುಲ್ಶನ್ ದೇವಯ್ಯ ಸದ್ಯ ತಮ್ಮ ಪಾತ್ರ ಕುಲಶೇಖರ ಎಂದೇ ಫೇಮಸ್ ಆಗಿದ್ದಾರೆ. ಗುಲ್ಶನ್ ಅವರ ಮದುವೆ ಹಾಗೂ ಲವ್ ಸ್ಟೋರಿ ಈವರೆಗೂ ಹೊರಬಂದಿರಲಿಲ್ಲ. ಇದೀಗ ಗುಲ್ಶನ್ ಮದುವೆ, ಲವ್ ಸ್ಟೋರಿ ಬಗ್ಗೆ ಅಪ್ಡೇಟ್ ಸಿಕ್ಕಿದೆ.
ಗುಲ್ಶನ್ ದೇವಯ್ಯ ಗ್ರೀಸ್‌ನ ಕಲಿರೊಯ್ ಜಿಯಫೆಟ್ ಎನ್ನುವವರನ್ನು ಲವ್ ಮಾಡಿದ್ದರು. ಅವರು ಭಾರತದ ಪ್ರವಾಸಕ್ಕೆ ಬಂದಾಗ, ಲವ್ ಶುರುವಾಗಿತ್ತು. 2012ರಲ್ಲಿ ಕೊಡವ ಸಂಪ್ರದಾಯದಂತೆ ವಿವಾಹವಾಗಿದ್ದರು.ಆದರೆ ಎಂಟು ವರ್ಷದ ನಂತರ ಇಬ್ಬರ ಮಧ್ಯೆ ಬಿರುಕು ಉಂಟಾಗಿ ಡಿವೋರ್ಸ್ ಪಡೆದುಕೊಂಡರು.
ಆದರೆ ಮೂರು ವರ್ಷಗಳ ಬಳಿಕ 2023ರಲ್ಲಿ ಗುಲ್ಶನ್ ಮತ್ತು ಕಲ್ಲಿರಾಯ್ಗೆ ತಾವು ಮಾಡಿದ್ದು ತಪ್ಪು ಎನ್ನಿಸಿದೆ. ಕ್ರಷ್ ಶುರುವಾಗಿದೆ. ಈಗ ಮುಂಚೆಗಿಂತಲೂ ನಮ್ಮ ಪ್ರೀತಿ ಹೆಚ್ಚಾಗಿದೆ ಅಂತಾರೆ ಗುಲ್ಶನ್.
ಇವರೀಗ ಡಿವೋರ್ಸ್ ಆದ್ಮೇಲೆ ಮತ್ತೆ ಆಕೆಯ ಜೊತೆಯೇ ಕ್ರಷ್ ಆಗಿರುವ ವಿಷಯದ ಬಗ್ಗೆ ಮಾತನಾಡಿದ್ದಾರೆ. ನಮ್ಮ ನಡುವೆ ಏನೋ ಡಿಫರೆನ್ಸ್ ಆಯ್ತು. ಅದಕ್ಕೇ ಡಿವೋರ್ಸ್ ತೆಗೆದುಕೊಂಡ್ವಿ. ಎಲ್ಲಾ ರಿಲೇಷನ್ಷಿಪ್ಗಳಲ್ಲಿಯೂ ಒಂದು ಆತ್ಮ ಎಂದು ಇರುತ್ತದೆ. ಅಲ್ಲಿ ನಾವು ಮಾಡಿರೋದು ತಪ್ಪು ಎಂದು ತಿಳಿಯುತ್ತದೆ. ಇಬ್ಬರ ನಡುವೆ ಪ್ರೀತಿ ಇದ್ದರೆ ರಿಲೇಷನ್ಷಿಪ್ ಮುಂದುವರೆಯುತ್ತದೆ. ಆ ಪ್ರೀತಿ ನಮ್ಮಲ್ಲಿ ಇತ್ತು ಎಂದು ತಿಳಿಯಿತು. ಅದಕ್ಕಾಗಿಯೇ ಮತ್ತೆ ಒಂದಾದ್ವಿ ಎಂದಿದ್ದಾರೆ.
ಡಿವೋರ್ಸ್ ಕೊಟ್ಟ ಪತ್ನಿ ಮೇಲೆ ಕುಲಶೇಖರನಿಗೆ ಮತ್ತೆ ಕ್ರಶ್ ಆಗಿತ್ತಂತೆ!
