ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ನಿಯಂತ್ರಣ ರೇಖೆಯಲ್ಲಿ ನೆಲಬಾಂಬ್ ಸ್ಫೋಟಗೊಂಡಿದ್ದು, ಓರ್ವ ಸೈನಿಕ ಹುತಾತ್ಮರಾಗಿದ್ದಾರೆ. ಇಬ್ಬರಿಗೆ ಗಂಭೀರ ಗಾಯಗಳಾಗಿವೆ.
ಕೃಷ್ಣ ಘಾಟಿಯ ಸಾಮಾನ್ಯ ಪ್ರದೇಶದಲ್ಲಿ ಏರಿಯಾ ಡಾಮಿನೇಷನ್ ಗಸ್ತು ತಿರುಗುತ್ತಿದ್ದಾಗ, ಗಣಿ ಸ್ಫೋಟ ಸಂಭವಿಸಿದೆ. ಇದರಲ್ಲಿ ಒಬ್ಬ ಅಗ್ನಿವೀರ್ ಜವಾನ್ ಹುತಾತ್ಮರಾದರು. ಗಾಯಾಳುಗಳನ್ನು, ಅವರಲ್ಲಿ ಒಬ್ಬರು ಜೆಸಿಒ ಆಗಿದ್ದು, ಮಿಲಿಟರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
7 ಜೆಎಟಿ ರೆಜಿಮೆಂಟ್‌ನ ಅಗ್ನಿವೀರ್ ಲಲಿತ್ ಕುಮಾರ್ ಅವರು ಹುತಾತ್ಮಗೊಂಡಿದ್ದಾರೆ ಎಂದು ಸೇನೆಯ ವೈಟ್ ನೈಟ್ ಕಾರ್ಪ್ಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ದುಃಖದ ಈ ಸಮಯದಲ್ಲಿ ನಾವು ದುಃಖಿತ ಕುಟುಂಬದೊಂದಿಗೆ ನಿಲ್ಲುತ್ತೇವೆ ಎಂದು ಹೇಳಿದೆ.