Sunday, August 31, 2025

ಲಾಸ್ಟ್‌ ವಾರ್ನಿಂಕ್‌! ಪಬ್‌, ರೆಸ್ಟೋರೆಂಟ್‌ಗಳಲ್ಲಿ ಸ್ಮೋಕಿಂಗ್‌ ಝೋನ್‌ ಇಲ್ಲದಿದ್ರೆ ಲೈಸೆನ್ಸ್‌ ರದ್ದು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಿಲಿಕಾನ್ ಸಿಟಿ ಬೆಂಗಳೂರಿನ ಪಬ್, ಕ್ಲಬ್, ಹೋಟೆಲ್, ಬಾರ್‌ಗಳಿಗೆ ಬಿಬಿಎಂಪಿ ಬಿಗ್‌ಶಾಕ್ ನೀಡಿದೆ. ಬಿಬಿಎಂಪಿ ನೋಟಿಸ್ ಜಾರಿ ಮಾಡಿದರೂ ಪ್ರತಿಕ್ರಿಯಿಸದ ಹೋಟೆಲ್‌ಗಳು, ಪಬ್, ಕ್ಲಬ್, ರೆಸ್ಟೋರೆಂಟ್ ಪರವಾನಗಿ ರದ್ದು ಮಾಡಲು ಬಿಬಿಎಂಪಿ ಮುಂದಾಗಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಳೆದ 15 ದಿನಗಳ ಹಿಂದೆ ಸುಮಾರು 300ಕ್ಕೂ ಹೆಚ್ಚು ಪಬ್, ಬಾರ್, ರೆಸ್ಟೋರೆಂಟ್, ಹೋಟೆಲ್‌ಗಳಿಗೆ ನೋಟಿಸ್ ಜಾರಿ ಮಾಡಿತ್ತು. ಸ್ಮೋಕಿಂಗ್ ಝೋನ್ ನಿರ್ಮಾಣ ಮಾಡಿಲ್ಲ ಅಂತಾ ನೋಟಿಸ್ ನೀಡಿ ಎಚ್ಚರಿಸಿತ್ತು. ನೋಟಿಸ್ ಜಾರಿ ಮಾಡಿದರೂ ಹೋಟೆಲ್, ಪಬ್, ಬಾರ್, ರೆಸ್ಟೋರೆಂಟ್‌ಗಳು ಸರಿಪಡಿಸಿಕೊಂಡಿಲ್ಲ ಎಂಬ ಮಾಹಿತಿ ಬಿಬಿಎಂಪಿ ಪರಿಶೀಲನೆ ವೇಳೆ ಗೊತ್ತಾಗಿದೆ. ಹೀಗಾಗಿ ಅಂತಹ ಪಬ್, ಬಾರ್, ರೆಸ್ಟೋರೆಂಟ್, ಹೋಟೆಲ್‌ಗಳಿಗೆ ಬಿಸಿ ಮುಟ್ಟಿಸಲು ಪಾಲಿಕೆ ಮುಂದಾಗಿದೆ.

ಇನ್ನೂ ಬಿಬಿಎಂಪಿ ಮುಂದಿನ ವಾರ ನೋಟಿಸ್ ನೀಡಿದ್ದ ಸ್ಥಳಗಳನ್ನು ಪರಿಶೀಲನೆ ನಡೆಸಲಿದೆ. ಪರಿಶೀಲನೆ ನಡೆಸಿ ನೋಟಿಸ್ ಕೊಟ್ಟ ಮೇಲೂ ಸ್ಮೋಕಿಂಗ್ ಝೋನ್ ಅಳವಡಿಸಿಕೊಂಡಿಲ್ಲ ಎಂಬುದು ಕಂಡು ಬಂದರೆ ಪರವಾನಗಿ ರದ್ದು ಮಾಡಲಿದ್ದಾರೆ.

ಇದನ್ನೂ ಓದಿ