Wednesday, January 7, 2026

WPL 2026ಕ್ಕೂ ಮುನ್ನ ನಾಯಕತ್ವ ಬದಲಾವಣೆ: ಯುಪಿ ವಾರಿಯರ್ಸ್‌ ಜವಾಬ್ದಾರಿ ಮೆಗ್ ಲ್ಯಾನಿಂಗ್ ಕೈಗೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಿಳಾ ಪ್ರೀಮಿಯರ್ ಲೀಗ್‌ 2026ರ ಆರಂಭಕ್ಕೆ ಮುನ್ನ ಯುಪಿ ವಾರಿಯರ್ಸ್ ತಂಡ ಮಹತ್ವದ ನಿರ್ಧಾರ ಕೈಗೊಂಡಿದೆ. ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟರ್ ಮೆಗ್ ಲ್ಯಾನಿಂಗ್ ಅವರನ್ನು ತಂಡದ ಹೊಸ ನಾಯಕಿಯಾಗಿ ಘೋಷಿಸಲಾಗಿದ್ದು, ಅನುಭವದ ನಾಯಕತ್ವದ ಮೂಲಕ ಹೊಸ ಅಧ್ಯಾಯ ಆರಂಭಿಸುವ ವಿಶ್ವಾಸವನ್ನು ಫ್ರಾಂಚೈಸಿ ವ್ಯಕ್ತಪಡಿಸಿದೆ.

ಹರಾಜಿನಲ್ಲಿ 1.9 ಕೋಟಿ ರೂಪಾಯಿ ಮೊತ್ತಕ್ಕೆ ಯುಪಿ ವಾರಿಯರ್ಸ್ ಲ್ಯಾನಿಂಗ್ ಅವರನ್ನು ಖರೀದಿಸಿತ್ತು. ಗಾಯದ ಸಮಸ್ಯೆಯಿಂದಾಗಿ ನಾಯಕತ್ವದಿಂದ ಹಿಂದೆ ಸರಿದ ಅಲಿಸಾ ಹೀಲಿ ಬದಲಿಗೆ ಇದೀಗ ಲ್ಯಾನಿಂಗ್ ತಂಡವನ್ನು ಮುನ್ನಡೆಸಲಿದ್ದಾರೆ. ಈ ಹಿಂದೆ ಹೀಲಿ ಅನುಪಸ್ಥಿತಿಯಲ್ಲಿ ದೀಪ್ತಿ ಶರ್ಮಾ ನಾಯಕತ್ವ ವಹಿಸಿಕೊಂಡಿದ್ದರು. ಇದೀಗ ಅಪಾರ ಅನುಭವ ಹೊಂದಿರುವ ನಾಯಕಿಯನ್ನು ತಂಡದ ಮುಂಚೂಣಿಗೆ ತರುವ ಮೂಲಕ ಯುಪಿ ವಾರಿಯರ್ಸ್ ಹೊಸ ದಿಕ್ಕಿನತ್ತ ಹೆಜ್ಜೆ ಇಟ್ಟಿದೆ.

ಇದನ್ನೂ ಓದಿ: Rice series 38 | ಪ್ರೋಟೀನ್ ಭರಿತ ಬ್ರೇಕ್ ಫಾಸ್ಟ್ ಇದ್ರೆ ಎಷ್ಟು ಒಳ್ಳೆದು ಅಲ್ವಾ? ಅದಕ್ಕೆ ಸೋಯಾ ಬಿರಿಯಾನಿ ಟ್ರೈ ಮಾಡಿ

ಮಹಿಳಾ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ನಾಯಕಿಯರಲ್ಲಿ ಒಬ್ಬರಾಗಿರುವ ಮೆಗ್ ಲ್ಯಾನಿಂಗ್, ಆಸ್ಟ್ರೇಲಿಯಾ ತಂಡವನ್ನು ಏಳು ವಿಶ್ವಕಪ್ ಪ್ರಶಸ್ತಿಗಳತ್ತ ಮುನ್ನಡೆಸಿದ್ದಾರೆ. ನಾಯಕಿಯಾಗಿ ಆಯ್ಕೆಯಾಗಿರುವುದು ಗೌರವದ ವಿಷಯ ಎಂದು ಲ್ಯಾನಿಂಗ್ ಪ್ರತಿಕ್ರಿಯಿಸಿದ್ದು, WPL ಪ್ರತಿ ವರ್ಷ ಬೆಳೆಯುತ್ತಿರುವುದು ಸಂತಸದ ಸಂಗತಿ ಎಂದಿದ್ದಾರೆ. ಅಂತಾರಾಷ್ಟ್ರೀಯ ಅನುಭವ ಮತ್ತು ಭಾರತೀಯ ಪ್ರತಿಭೆಗಳ ಸಮತೋಲನ ಹೊಂದಿರುವ ತಂಡವನ್ನು ಮುನ್ನಡೆಸಲು ತಾವು ಸಿದ್ಧರಾಗಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

error: Content is protected !!