Saturday, November 8, 2025

ನೀರು ಹಾಯಿಸಲು ಹೋಗಿದ್ದ ಸಹೋದರರ ಮೇಲೆ ಚಿರತೆ ದಾಳಿ: ಓರ್ವ ಸಾವು

ಹೊಸದಿಗಂತ ವರದಿ ಹಾವೇರಿ:

ಜಮೀನಿಗೆ ರಾತ್ರಿ ವೇಳೆ ನೀರು ಹಾಯಿಸಲು ತೆರಳಿದ್ದ ಸಹೋದರರ ಮೇಲೆ ಚಿರತೆ ದಾಳಿ ನಡೆಸಿದ ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟು, ಇನ್ನೊಬ್ಬ ಗಾಯಗೊಂಡ ಘಟನೆ ರಟ್ಟಿಹಳ್ಳಿ ತಾಲೂಕು ಕಣವಿಶಿದ್ಗೇರಿ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.

ಚಿರತೆ ದಾಳಿಗೊಳಗಾದ ಕಣವಿಶಿದ್ಗೇರಿ ಗ್ರಾಮದ ಬೀರಪ್ಪ ಹನುಮಂತಪ್ಪ ಬಳಗಾವಿ(30) ಮೃತ ಪಟ್ಟಿದ್ದು, ಇನ್ನೊಬ್ಬ ಸಹೋದರ ಗಣೇಶ ಬಳಗಾವಿ ಗಂಭೀರ ಗಾಯಗೊಂಡಿದ್ದಾರೆ.

ಶುಕ್ರವಾರ ರಾತ್ರಿ ತಮ್ಮ ಜಮೀನಿಗೆ ನೀರು ಹಾಯಿಸಲು ತೆರಳಿದ್ದ ವೇಳೆ ಏಕಾಏಕಿ ಚಿರತೆ ದಾಳಿ ನಡೆಸಿದೆ. ಚಿರತೆ ಬೀರಪ್ಪನ ಗಂಟಲಿಗೆ ಬಾಯಿ ಹಾಕಿ ಕಚ್ಚಿದ ಹಿನ್ನೆಲೆಯಲ್ಲಿ ಆತ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇನ್ನೊಬ್ಬ ಸಹೋದರ ಗಣೇಶ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನಾ ಸ್ಥಳಕ್ಕೆ ರಟ್ಟಿಹಳ್ಳಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲಿದ್ದಾರೆ. ರಟ್ಟೀಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

error: Content is protected !!