March 26, 2026
Thursday, March 26, 2026
spot_img

ಮಲೆ ಮಹದೇಶ್ವರ ಬೆಟ್ಟದ ಕ್ರಾಸ್‌ ಬಳಿ ಮತ್ತೆ ಕಾಣಿಸಿದ ಚಿರತೆ, ಭಯಭೀತರಾದ ಜನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಇತಿಹಾಸ ಪ್ರಸಿದ್ಧ ಮಲೆ ಮಹದೇಶ್ವರ ಬೆಟ್ಟದ ರಸ್ತೆಯ ತಿರುವಿನಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಜನ ಭಯಭೀತರಾಗಿದ್ದಾರೆ.

ತಾಳುಬೆಟ್ಟದಿಂದ ಮಹದೇಶ್ವರ ಬೆಟ್ಟ ಮಾರ್ಗದ ಐದನೇ ತಿರುವಿನಲ್ಲಿ ತಡರಾತ್ರಿ ಚಿರತೆ ಕಾಣಿಸಿದೆ. ಕಾರ್‌ನಲ್ಲಿ ಹೋಗುವವರು ನಿಧಾನಕ್ಕೆ ತೆರಳಿದ್ದು, ಬೈಕ್‌ನಲ್ಲಿ ಹೋಗುವವರು ವಿಡಿಯೋ ಮಾಡಿದ್ದಾರೆ.

ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ. ಜನ ಬೆಟ್ಟದ ಕಡೆ ಹೋಗೋದಕ್ಕೂ ಹಿಂದೆ ಮುಂದೆ ನೋಡ್ತಿದ್ದಾರೆ.

ರಾತ್ರಿ ವೇಳೆ ದ್ವಿಚಕ್ರ ವಾಹನಗಳಲ್ಲಿ ಬೆಟ್ಟಕ್ಕೆ ಯಾರೂ ಹೋಗಬೇಡಿ ಎಂದು ಮನವಿ ಮಾಡಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !