February 1, 2026
Sunday, February 1, 2026
spot_img

ಎಸ್ ಐಟಿ ತನಿಖೆಯಿಂದ ಸಿಜೆ ರಾಯ್ ಆತ್ಮಹತ್ಯೆಯ ನಿಜಾಂಶ ಹೊರಬರಲಿ: ದಿನೇಶ್ ಗುಂಡೂರಾವ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿಜೆ ರಾಯ್ ಆತ್ಮಹತ್ಯೆ ನಿಜಾಂಶಗಳು ಎಸ್ ಐಟಿ ತನಿಖೆಯಿಂದ ಗೊತ್ತಾಗಬೇಕಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಟಿ ಮತ್ತು ಇಡಿ ಸಂಸ್ಥೆಗಳ ದುರುಪಯೋಗ ಆಗುತ್ತಿದೆ ಎಂದು ಸಾರ್ವಜನಿಕರೇ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಅನೇಕ ಜನರಿಗೆ ಭಯ ಆಗುತ್ತಿದೆ ಮತ್ತು ಅನೇಕರ ತೇಜೋವಧೆ ನಡೆಯುತ್ತಿದೆ. ರಾಜಕೀಯವಾಗಿ ಬ್ಲ್ಯಾಕ್ ಮೇಲ್ ಗೆ ಮತ್ತು ಬೇರೆ ಬೇರೆ ಉದ್ದೇಶಗಳಿಗೆ ದಾಳಿಯಾಗುತ್ತಿರುವಂತ ವ್ಯವಸ್ಥೆ ದೇಶದಲ್ಲಿದೆ. ಆದರೆ ಸಿ ಜೆ ರಾಯ್ ಆತ್ಮಹತ್ಯೆ ಕುರಿತು ಈಗಲೇ ಏನು ಹೇಳಲು ಬರುವುದಿಲ್ಲ. ತನಿಖೆಯ ಮೂಲಕವೇ ಸತ್ಯ ತಿಳಿಯಬೇಕಿದೆ ಎಂದರು.

ಇಡಿ ದಾಳಿ ಪ್ರಕರಣದಲ್ಲಿ ಶೇಕಡಾ 95 ರಷ್ಟು ದಾಳಿಗೊಳಗಾದವರು ತಪ್ನು ಮಾಡಿಲ್ಲ ಎನ್ನುವುದು ಬಹಿರಂಗ ಆಗಿದೆ. ದಾಳಿಗೊಳಗಾದವರಿಗೆ ಹಿಂಸೆ ಆಗುತ್ತದೆ ಇದರಿಂದ ಸಮಸ್ಯೆ ಆಗುತ್ತಿದೆ. ರಾಯ್ ಆತ್ಮಹತ್ಯೆ ತುಂಬಾ ಗಂಭೀರ ವಿಷಯ‌. ನಿಷ್ಪಕ್ಷಪಾತ ತನಿಖೆ ಆಗಬೇಕು ಆಗ ಸತ್ಯ ಅನಾವರಣಗೊಳ್ಳಲಿದೆ ಎಂದು ತಿಳಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !