ನಾವು ಬದುಕಿನಲ್ಲಿ ಎದುರಿಸುವ ದೊಡ್ಡ ಆತಂಕಗಳಲ್ಲಿ ಒಂದೇ ಅದು Comparison. ಇತರರ ಜೀವನ, ಸಾಧನೆ, ರೂಪ, ಹಣಕಾಸು ಅಥವಾ ಯಶಸ್ಸಿನ ಜೊತೆ ನಮ್ಮನ್ನು ಹೋಲಿಸುವ ಕ್ಷಣದಿಂದಲೇ ಮನಸ್ಸಿನಲ್ಲಿ ಅಸಮಾಧಾನ ಬೆಳೆದು ಬರುತ್ತದೆ. ಈ ಹೋಲಿಕೆಗಳು ನಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸಿ, ನೆಮ್ಮದಿಯನ್ನು ಕಳೆದು, ಸಂತೋಷವನ್ನು ಕಡಿಮೆ ಮಾಡುತ್ತದೆ.
- ಆತ್ಮವಿಶ್ವಾಸ ಕುಗ್ಗುತ್ತದೆ: ಯಾರಾದರೂ ಹೆಚ್ಚು ಸಾಧಿಸಿದ್ದಾರೆ ಎಂದು ಯೋಚಿಸಿದಾಗ ನಾವು ನಮ್ಮ ಸಾಮರ್ಥ್ಯವನ್ನೇ ಪ್ರಶ್ನಿಸುವಂತೆ ಆಗುತ್ತದೆ. ಇದು ಮನಸ್ಸಿನಲ್ಲಿ ನೆಗೆಟಿವ್ ಫೀಲಿಂಗ್ ಉಂಟುಮಾಡುತ್ತದೆ.
- ನಮ್ಮ ಪ್ರಯಾಣ ಮರೆತುಹೋಗುತ್ತದೆ: ಪ್ರತಿ ವ್ಯಕ್ತಿಗೂ ಜೀವನದಲ್ಲಿ ಬೇರೆ ಬೇರೆ ಹಾದಿ ಇದೆ. ಹೋಲಿಕೆ ಮಾಡೋದರಿಂದ ನಮ್ಮ ಪ್ರಯತ್ನ, ಬೆಳವಣಿಗೆ, ಮತ್ತು ಹಾದಿ ಕಾಣದೇ ಹೋಗುತ್ತದೆ.
- ಕೃತಜ್ಞತೆ ಕಡಿಮೆಯಾಗುತ್ತದೆ: ಇತರರ ಜೀವನ ನೋಡುತ್ತಾ ನಮ್ಮ ಬಳಿ ಇರುವ ಚಿಕ್ಕ ಸಂತೋಷಗಳನ್ನು ನಾವು ಗಮನಿಸುವುದಿಲ್ಲ. ಇದರಿಂದ ತೃಪ್ತಿ ಕಮ್ಮಿಯಾಗುತ್ತದೆ.
- ಒತ್ತಡ ಮತ್ತು ಆತಂಕ ಹೆಚ್ಚುತ್ತದೆ: “ನನಗೂ ಹಾಗೆ ಆಗ್ಬೇಕು” ಅನ್ನೋ ಆಸೆ ಮನಸ್ಸಿನಲ್ಲಿ ಒತ್ತಡ, ಆತಂಕ ಉಂಟುಮಾಡುತ್ತದೆ. ಇದರಿಂದ ಮಾನಸಿಕ ಶಾಂತಿ ಹಾಳಾಗುತ್ತದೆ.
- ನಿಜವಾದ ಸಂತೋಷ ಮಾಯವಾಗುತ್ತೆ: ನಾವು ಯಾರು, ನಮ್ಮ ಸಾಮರ್ಥ್ಯ ಎಷ್ಟು ಅನ್ನೋದು ಅರಿಯದೆ ಬೇರೆಯವರ ಬದುಕಿನ ಹಿಂದೆ ಓಡುವಾಗ ನಮ್ಮ ಜೀವನದ ನಿಜವಾದ ಸಂತೋಷ ದೂರವಾಗುತ್ತದೆ.

