ಸಂತೋಷ ಅನ್ನೋದು ಯಾರೂ ನಮಗೆ ಕೊಡೋದಿಲ್ಲ. ಅದು ನಮ್ಮೊಳಗಿಂದಲೇ ಬರುತ್ತದೆ. ದಿನನಿತ್ಯದ ಒತ್ತಡ, ಕೆಲಸ, ಜೀವನದ ಚಿಂತೆಗಳ ಮಧ್ಯೆ ನಿಜವಾದ ಸಂತೋಷ ಕಂಡುಕೊಳ್ಳಲು ನಾವು ಕೆಲವೊಂದು ಸರಳ ಅಭ್ಯಾಸಗಳನ್ನು ಅಳವಡಿಸಿಕೊಂಡರೆ ಸಾಕು.
- ಪ್ರತಿ ದಿನ ಕೃತಜ್ಞತೆಯಿಂದ ಶುರುಮಾಡಿ: ಬೆಳಗ್ಗೆ ಎದ್ದ ಕೂಡಲೇ “ನನಗೆ ಈ ದಿನ ಕೊಟ್ಟಿರೋದಕ್ಕೆ ಧನ್ಯವಾದ” ಅನ್ನೋ ಮನಸ್ಥಿತಿ ಇಟ್ಟುಕೊಳ್ಳಿ. ಇದು ದಿನದ ಉತ್ಸಾಹವನ್ನೂ, ಮನಸ್ಸಿನ ಶಾಂತವನ್ನೂ ಕಾಪಾಡುತ್ತದೆ.
- ಆರೋಗ್ಯದ ಕಡೆ ಗಮನಕೊಡಿ: ಆರೋಗ್ಯಕರ ಆಹಾರ, ನಿಯಮಿತ ವ್ಯಾಯಾಮ ಮತ್ತು ಉತ್ತಮ ನಿದ್ರೆ – ಇವು ಸಂತೋಷದ ಮೂಲ. ದೇಹ ಆರೋಗ್ಯಕರವಾಗಿದ್ದರೆ ಮನಸ್ಸೂ ಹಗುರವಾಗಿರುತ್ತದೆ.
- ನಗುವಿಗೆ ಸಮಯ ಕೊಡಿ: ಸ್ನೇಹಿತರು, ಕುಟುಂಬದವರು ಅಥವಾ ಹಾಸ್ಯ ಸಿನಿಮಾ ನೋಡಿ ನಗೋದನ್ನು ಕಲಿಯಿರಿ. ನಗುವು ಮನಸ್ಸಿಗೆ ಔಷಧ. ದಿನಕ್ಕೆ ಕನಿಷ್ಠ ಒಂದು ಬಾರಿ ನಗುವುದು ನಿಮ್ಮ ಮನೋಭಾವವನ್ನು ಬದಲಿಸುತ್ತದೆ.
- ಹೋಲಿಕೆ ಮಾಡಬೇಡಿ: ಪ್ರತಿಯೊಬ್ಬರ ಜೀವನ ವಿಭಿನ್ನ. ಇತರರನ್ನು ಹೋಲಿಸಿ ನೋಡುವ ಬದಲು ನಿಮ್ಮ ಪ್ರಗತಿಯತ್ತ ಗಮನಕೊಡಿ. ಇದು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.
- ಒಳ್ಳೆಯವರ ಜೊತೆ ಕಾಲ ಕಳೆಯಿರಿ: ಸಕಾರಾತ್ಮಕ ವ್ಯಕ್ತಿಗಳು ನಿಮ್ಮ ಮನಸ್ಸಿಗೆ ಶಕ್ತಿ ನೀಡುತ್ತಾರೆ. ಅವರ ಜೊತೆ ಕಾಲ ಕಳೆಯುವುದರಿಂದ ನಿಮ್ಮ ಜೀವನದಲ್ಲೂ ಸಂತೋಷ ಮತ್ತು ಶಾಂತಿ ಹೆಚ್ಚಾಗುತ್ತದೆ.

