ಜೀವನದಲ್ಲಿ ಬದಲಾವಣೆ ಅನಿವಾರ್ಯ. ಆದರೆ ಕೆಲವು ಬದಲಾವಣೆಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನ, ಸಹನೆ ಮತ್ತು ನಂಬಿಕೆ ಬೇಕಾಗುತ್ತದೆ. ಮನೋವಿಜ್ಞಾನ ಆಧಾರಿತ ಕೆಲ ಅಭ್ಯಾಸಗಳನ್ನು ರೂಢಿಸಿಕೊಂಡರೆ ಕೇವಲ ಒಂದು ತಿಂಗಳಲ್ಲಿ ಜೀವನದಲ್ಲಿ ಅರ್ಥಪೂರ್ಣ ಬದಲಾವಣೆಯನ್ನು ಕಾಣಬಹುದು ಎಂದು ತಜ್ಞರು ಹೇಳುತ್ತಾರೆ.
- ಸಾವಧಾನತೆ (Mindfulness) ರೂಢಿಸಿಕೊಳ್ಳುವುದು ಅತ್ಯಂತ ಮುಖ್ಯ. ದಿನಕ್ಕೆ ಕೇವಲ ಐದು ನಿಮಿಷವಾದರೂ ನಿಶ್ಶಬ್ದವಾಗಿ ಕುಳಿತು ಪ್ರಸ್ತುತ ಕ್ಷಣದಲ್ಲಿ ಮನಸ್ಸನ್ನು ಕೇಂದ್ರೀಕರಿಸುವುದು ಒತ್ತಡವನ್ನು ಕಡಿಮೆ ಮಾಡಿ ಶಾಂತಿಯನ್ನ ಹೆಚ್ಚಿಸುತ್ತದೆ.
- ಕೃತಜ್ಞತೆ (Gratitude) ಬೆಳೆಸಿಕೊಳ್ಳುವುದು ಮುಖ್ಯ. ಪ್ರತಿದಿನ ನೀವು ಧನ್ಯರಾಗಿರುವ ಮೂರು ವಿಷಯಗಳನ್ನು ಬರೆಯುವ ಅಭ್ಯಾಸವು ನಿಮ್ಮ ಜೀವನದ ದೃಷ್ಟಿಕೋನವನ್ನು ಬದಲಾಯಿಸುತ್ತದೆ.
- ಅತಿಯಾಗಿ ಹಚ್ಚಿಕೊಳ್ಳುವುದನ್ನು (Attachment) ಬಿಡಿ. ಜನರು, ಆಸ್ತಿ, ಅಥವಾ ಪರಿಸ್ಥಿತಿಗಳ ಮೇಲಿನ ಅತಿಯಾದ ಅವಲಂಬನೆ ನೋವಿಗೆ ಕಾರಣವಾಗುತ್ತದೆ.
- ಸ್ವಯಂ ಸಹಾನುಭೂತಿ (Self-compassion) ಬೆಳೆಸಿಕೊಳ್ಳಿ. ತಪ್ಪುಗಳು ಜೀವನದ ಭಾಗ ಎನ್ನುವ ಅರಿವು ಬೆಳವಣಿಗೆಗೆ ದಾರಿ ಮಾಡುತ್ತದೆ.
- ಕೊನೆಯಲ್ಲಿ, ಅಶಾಶ್ವತತೆಯನ್ನು (Impermanence) ಹಾಗೂ ಅನಿಶ್ಚಿತತೆಯನ್ನು (Uncertainty) ಸ್ವೀಕರಿಸಿ. ಎಲ್ಲವೂ ಬದಲಾಗುತ್ತದೆ ಎಂಬ ಸತ್ಯವನ್ನು ಅರ್ಥಮಾಡಿಕೊಂಡಾಗ ನಾವು ಹೆಚ್ಚು ಶಾಂತ ಹಾಗೂ ಸಂತೋಷದಿಂದ ಬದುಕಬಹುದು.

