April 11, 2026
Saturday, April 11, 2026
spot_img

LIFESTYLE | ರಾತ್ರಿ ಸಾಕ್ಸ್ ಹಾಕಿಕೊಂಡು ಮಲಗೋದ್ರಿಂದ ಸಿಗೋ ಈ ಸೀಕ್ರೆಟ್ ಬೆನಿಫಿಟ್ಸ್ ಗೊತ್ತಾ?

ಬೇಸಿಗೆಯಲ್ಲಿ ಸಾಕ್ಸ್ ಹಾಕಿಕೊಂಡು ಮಲಗೋದು ಕೇಳಲು ಸ್ವಲ್ಪ ವಿಚಿತ್ರ ಅನಿಸಬಹುದು. “ಇಷ್ಟು ಸೆಕೆಯಲ್ಲಿ ಮತ್ತೆ ಸಾಕ್ಸ್ ಏಕೆ?” ಅನ್ನೋ ಪ್ರಶ್ನೆ ಸಹಜ. ಆದರೆ ಎಸಿ ರೂಮ್‌ನಲ್ಲಿ ಮಲಗೋವರು, ರಾತ್ರಿ ಕಾಲು ತಂಪಾಗೋರು ಅಥವಾ ಸರಿಯಾದ ನಿದ್ರೆ ಬಾರದವರು ಇದನ್ನು ಒಮ್ಮೆ ಟ್ರೈ ಮಾಡಬಹುದು. ಸರಿಯಾದ ಫ್ಯಾಬ್ರಿಕ್ ಸಾಕ್ಸ್ ಆಯ್ಕೆ ಮಾಡಿದರೆ ಬೇಸಿಗೆಯಲ್ಲೂ ಇದರ ಲಾಭ ಸಿಗುತ್ತದೆ.

ಎಸಿ ರೂಮ್‌ನಲ್ಲಿ ಕಾಲು ತಂಪಾಗೋದನ್ನು ತಡೆಯುತ್ತೆ
ಬೇಸಿಗೆಯಲ್ಲಿ ಹಲವರು ಎಸಿ ಅಥವಾ ಫ್ಯಾನ್ ಫುಲ್ ಸ್ಪೀಡ್‌ನಲ್ಲಿ ಇಟ್ಟು ಮಲಗುತ್ತಾರೆ. ಇದರಿಂದ ಕಾಲುಗಳು ತಂಪಾಗಿ ಅಸೌಕರ್ಯ ಉಂಟಾಗಬಹುದು. ಲೈಟ್ ಕಾಟನ್ ಸಾಕ್ಸ್ ಧರಿಸಿದರೆ ಈ ಸಮಸ್ಯೆ ಕಡಿಮೆಯಾಗಬಹುದು.

ನಿದ್ರೆ ಬೇಗ ಬರಲು ಸಹಾಯ
ಕಾಲುಗಳು ಕಂಫರ್ಟಬಲ್ ಆಗಿದ್ದರೆ ದೇಹ ಬೇಗ ರಿಲ್ಯಾಕ್ಸ್ ಆಗುತ್ತದೆ. ವಿಶೇಷವಾಗಿ ಎಸಿ ರೂಮ್‌ನಲ್ಲಿ ಮಲಗುವವರಿಗೆ ಸಾಕ್ಸ್ ಉತ್ತಮ ನಿದ್ರೆ ಕೊಡಲು ಸಹಾಯಕ.

ಪಾದಗಳ ಒಣತನ ಕಡಿಮೆ
ಬೇಸಿಗೆಯಲ್ಲಿ ಧೂಳು, ಬಿಸಿಲು ಮತ್ತು ಡಿಹೈಡ್ರೇಷನ್‌ನಿಂದ ಪಾದಗಳು ಒಣಗಿ ಬಿರುಕುಬಿಟ್ಟಿರಬಹುದು. ರಾತ್ರಿ ಮಾಯಿಶ್ಚರೈಸರ್ ಹಚ್ಚಿ ಲೈಟ್ ಕಾಟನ್ ಸಾಕ್ಸ್ ಹಾಕಿಕೊಂಡರೆ ಬೆಳಿಗ್ಗೆ ಪಾದಗಳು ಸಾಫ್ಟ್ ಆಗಿರುತ್ತವೆ.

ದೇಹದ ತಾಪಮಾನ ಬ್ಯಾಲೆನ್ಸ್
ಸಾಕ್ಸ್ ದೇಹದ ಒಳಗಿನ ತಾಪಮಾನವನ್ನು ಸಮತೋಲನದಲ್ಲಿಡಲು ಸಹಾಯ ಮಾಡಬಹುದು, ವಿಶೇಷವಾಗಿ ರಾತ್ರಿ ತಂಪಾದ ವಾತಾವರಣದಲ್ಲಿ.

ಹೆಚ್ಚು ಕಂಫರ್ಟ್, ಕಡಿಮೆ ಡಿಸ್ಟರ್ಬನ್ಸ್
ಮಧ್ಯರಾತ್ರಿ ಕಾಲು ತಂಪಾಗಿ ಎಚ್ಚರಗೊಳ್ಳುವ ಸಮಸ್ಯೆ ಇದ್ದರೆ, ಸಾಕ್ಸ್ ಇದನ್ನು ಕಡಿಮೆ ಮಾಡುತ್ತದೆ.

ಬೇಸಿಗೆಯಲ್ಲಿ ಮಾತ್ರ ತುಂಬಾ ದಪ್ಪ ವೂಲೆನ್ ಸಾಕ್ಸ್ ಬೇಡ. ಲೈಟ್ ಕಾಟನ್ ಅಥವಾ breathable socks ಬಳಸಿದರೆ ಕಂಫರ್ಟ್ ಜೊತೆಗೆ ಉತ್ತಮ ನಿದ್ರೆ ಸಿಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !