ಚಳಿಗಾಲ ಶುರುವಾದಾಗ ತ್ವಚೆಯಷ್ಟೇ ತುಟಿಗಳೂ ಒಣಗೋದು, ಬಿರುಕು ಬಿಡೋದು ತುರಿಕೆ ಮುಂತಾದ ಸಮಸ್ಯೆ ಹೆಚ್ಚಾಗುತ್ತದೆ. ಶೀತ ಗಾಳಿ ಮತ್ತು ತೇವಾಂಶದ ಕೊರತೆ ತುಟಿಗಳ ನೈಸರ್ಗಿಕ ತೈಲವನ್ನು ಕಳೆದುಹೋಗುವಂತೆ ಮಾಡುತ್ತದೆ. ಮೃದುವಾದ, ತಾಜಾ ತುಟಿಗಳನ್ನು ಕಾಪಾಡಿಕೊಳ್ಳಲು ಚಳಿಗಾಲದಲ್ಲಿ ವಿಶೇಷ ಕಾಳಜಿ ಅಗತ್ಯವಿದೆ. ಸೂಕ್ತ ಪೋಷಣೆ ಮತ್ತು ನೈಸರ್ಗಿಕ ಆರೈಕೆ ಮೂಲಕ ಈ ಸಮಸ್ಯೆಯನ್ನು ಸರಳವಾಗಿ ತಡೆಗಟ್ಟಬಹುದು.
- ನೀರಿನ ಸೇವನೆ ಹೆಚ್ಚಿಸಿ: ಚಳಿಗಾಲದಲ್ಲಿ ದಾಹ ಕಡಿಮೆಯಾದರೂ, ದೇಹದ ತೇವಾಂಶ ಉಳಿಸಲು ಸಾಕಷ್ಟು ನೀರು ಕುಡಿಯುವುದು ಮುಖ್ಯ. ನೀರಿನ ಕೊರತೆ ತುಟಿಗಳನ್ನು ಒಣಗಿಸುತ್ತದೆ.
- ಲಿಪ್ ಬಾಮ್ ಬಳಕೆ: ನೈಸರ್ಗಿಕ ಶಿಯಾ ಬಟರ್, ಬೀಸ್‌ವೇಕ್ಸ್ ಅಥವಾ ಕೊಬ್ಬರಿ ಎಣ್ಣೆ ಹೊಂದಿರುವ ಲಿಪ್ ಬಾಮ್ ತುಟಿಗಳ ತೇವಾಂಶವನ್ನು ಕಾಯ್ದುಕೊಳ್ಳುತ್ತದೆ. ದಿನಕ್ಕೆ ಹಲವಾರು ಬಾರಿ ಬಳಸುವುದು ಉತ್ತಮ.
- ನಾಲಗೆಯಿಂದ ತುಟಿಗಳನ್ನು ಸವರಬೇಡಿ: ತುಟಿಗಳನ್ನು ಸವರುವುದು ತಾತ್ಕಾಲಿಕ ತಂಪು ನೀಡಬಹುದು, ಆದರೆ ಅದು ಇನ್ನಷ್ಟು ಒಣತನವನ್ನು ಉಂಟುಮಾಡುತ್ತದೆ.
- ಮೃತಕೋಶ ತೆರವು: ವಾರಕ್ಕೆ ಒಮ್ಮೆ ಸಕ್ಕರೆ ಮತ್ತು ಜೇನು ಮಿಶ್ರಣದಿಂದ ತುಟಿಗಳನ್ನು ಸ್ಕ್ರಬ್ ಮಾಡಿದರೆ ಹೊಸ ಕೋಶಗಳು ಬೆಳೆಯುತ್ತವೆ.
- ರಾತ್ರಿ ಪೋಷಣೆ: ನಿದ್ರೆಗೆ ಮುನ್ನ ತುಟಿಗಳಿಗೆ ಬಾದಾಮಿ ಎಣ್ಣೆ ಅಥವಾ ತುಪ್ಪ ಹಚ್ಚಿದರೆ ಬೆಳಿಗ್ಗೆ ತುಟಿಗಳು ಮೃದುಗೊಳ್ಳುತ್ತವೆ.

