Wednesday, November 5, 2025

Lipstick | ಪ್ರತಿದಿನ ತುಟಿಗಳಿಗೆ ಲಿಪ್​ಸ್ಟಿಕ್ ಹಚ್ಚಿದ್ರೆ ಏನಾಗುತ್ತೆ ನೋಡಿ!

ಲಿಪ್‌ಸ್ಟಿಕ್ ಮಹಿಳೆಯರ ಅಂದವನ್ನು ಹೆಚ್ಚಿಸುವ ಪ್ರಮುಖ ಅಲಂಕಾರ ವಸ್ತು. ಆದರೆ ಇತ್ತೀಚಿನ ಸಂಶೋಧನೆಗಳು ಕೆಲವು ಲಿಪ್‌ಸ್ಟಿಕ್‌ಗಳಲ್ಲಿ ಅಡಗಿರುವ ಅಪಾಯಗಳನ್ನ ಬಹಿರಂಗಪಡಿಸಿವೆ. ಬಣ್ಣದ ಹಿಂದೆ ಅಡಗಿರುವ ಕೆಲವು ರಾಸಾಯನಿಕಗಳು ದೀರ್ಘಾವಧಿಯಲ್ಲಿ ಶ್ವಾಸಕೋಶದ ಕ್ಯಾನ್ಸರ್‌ನಿಂದ ಹಿಡಿದು ನರಮಂಡಲದ ಸಮಸ್ಯೆಗಿಂತಲೂ ಹೆಚ್ಚು ಅಪಾಯವನ್ನು ಉಂಟುಮಾಡಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಲಿಪ್‌ಸ್ಟಿಕ್‌ನಲ್ಲಿ ಸಾಮಾನ್ಯವಾಗಿ ಪತ್ತೆಯಾಗುವ ಕ್ಯಾಡ್ಮಿಯಮ್, ಸೀಸ್, ಕ್ರೋಮಿಯಂ ಮತ್ತು ಅಲ್ಯೂಮಿನಿಯಂ ಎಂಬ ಭಾರಲೋಹಗಳು ತುಟಿಗಳ ಚರ್ಮದ ಮೂಲಕ ದೇಹಕ್ಕೆ ಪ್ರವೇಶಿಸಿ ನಿಧಾನವಾಗಿ ಅಲ್ಲಿ ಸಂಗ್ರಹವಾಗುತ್ತವೆ. ಅವು ಉಸಿರಾಟದ ಸಮಸ್ಯೆ, ನರಮಂಡಲದ ಹಾನಿ ಮತ್ತು ಹಾರ್ಮೋನ್ ಅಸಮತೋಲನಕ್ಕೆ ಕಾರಣವಾಗುತ್ತವೆ. ನ್ಯಾಷನಲ್ ಮೆಡಿಕಲ್ ಲೈಬ್ರರಿ ಆಫ್ ಮೆಡಿಸಿನ್‌ ಅಧ್ಯಯನದ ಪ್ರಕಾರ, ಲಿಪ್‌ಸ್ಟಿಕ್‌ನಲ್ಲಿನ ಕ್ಯಾಡ್ಮಿಯಮ್ ಶ್ವಾಸಕೋಶದ ಕ್ಯಾನ್ಸರ್ ಅಪಾಯವನ್ನೂ ಹೆಚ್ಚಿಸುತ್ತದೆ.

ಮುನ್ನೆಚ್ಚರಿಕೆ ಕ್ರಮಗಳು:

  • ಲೀಡ್ ಫ್ರೀ ಅಥವಾ ನಾನ್-ಟಾಕ್ಸಿಕ್ ಲಿಪ್‌ಸ್ಟಿಕ್‌ಗಳನ್ನು ಆಯ್ಕೆಮಾಡಿ.
  • ಆಹಾರ ತಿನ್ನುವ ಮೊದಲು ಲಿಪ್‌ಸ್ಟಿಕ್ ತೆಗೆಯಿರಿ.
  • ಪ್ರತಿದಿನದ ಬದಲಿಗೆ ಸಾಂದರ್ಭಿಕವಾಗಿ ಮಾತ್ರ ಬಳಸಿ.
  • ಬೀಟ್‌ರೂಟ್ ಪೌಡರ್ ಅಥವಾ ಕೋಕೋ ಬಟರ್‌ನಂತಹ ನೈಸರ್ಗಿಕ ಪರ್ಯಾಯಗಳನ್ನು ಬಳಸಬಹುದು.
  • ಲಿಪ್‌ಸ್ಟಿಕ್ ಪದಾರ್ಥಗಳ ಪಟ್ಟಿಯನ್ನು ಓದುವುದು ಹಾಗೂ ಹಾನಿಕಾರಕ ರಾಸಾಯನಿಕಗಳನ್ನು ತಪ್ಪಿಸುವುದು ಅಗತ್ಯ.


error: Content is protected !!