ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ಹೊರವಲಯದ ಬಿಡದಿ ಬಳಿ ಇರುವ ಜಾಲಿವುಡ್ ಸ್ಟುಡಿಯೋ ಮತ್ತು ಅಡ್ವೆಂಚರ್ಸ್ ಗೆ ಬೀಗ ಜಡಿಯಲಾಗಿದೆ.
ರಾಮನಗರ ತಹಸೀಲ್ದಾರ್ ತೇಜಸ್ವಿನಿ ಖುದ್ದಾಗಿ ನಿಂತು ಜಾಲಿವುಡ್ ಸ್ಟುಡಿಯೋ ಮತ್ತು ಅಡ್ವೆಂಚರ್ಸ್ ಗೆ ಬೀಗ ಹಾಕಿಸಿದ್ದಾರೆ. ಈ ಜಾಲಿವುಡ್ ಸ್ಟುಡಿಯೋ ಮತ್ತು ಅಡ್ವೆಂಚರ್ಸ್ ನೊಳಗಡೆಯೇ ಬಿಗ್ ಬಾಸ್ ಶೋ ಶೂಟಿಂಗ್ ನಡೆಯುತ್ತಿದೆ. ಹೀಗಾಗಿ ಬಿಗ್ ಬಾಸ್ ಶೋ ಶೂಟಿಂಗ್ ಸ್ಥಗಿತಕ್ಕೂ ಸೂಚನೆ ನೀಡಲಾಗಿದೆ. ಜಾಲಿವುಡ್ ಸ್ಟುಡಿಯೋನ ಮೇನ್ ಗೇಟ್ ಗೆ ಬೀಗ ಜಡಿದು ಸೀಲ್ ಮಾಡಲಾಗಿದೆ.
ಜಾಲಿವುಡ್ ಸ್ಟುಡಿಯೋ ಮತ್ತು ಅಡ್ವೆಂಚರ್ಸ್ ಮಾಲಿನ್ಯ ನಿಯಂತ್ರಣ ಮಂಡಳಿಯು ಕಳೆದ ವರ್ಷ ಕೊಟ್ಟಿದ್ದ ನೋಟೀಸ್ ಗಳನ್ನು ತೀವ್ರವಾಗಿ ನಿರ್ಲಕ್ಷಿಸಿತ್ತು. ಹಸಿ ಕಸ, ಒಣ ಕಸವನ್ನು ಬೇರ್ಪಡಿಸುತ್ತಿರಲಿಲ್ಲ. ಜೊತೆಗೆ ನೀರನ್ನು ಶುದ್ದೀಕರಣ ಮಾಡುತ್ತಿರಲಿಲ್ಲ.
ಈ ಬಗ್ಗೆ ಅನೇಕ ಭಾರಿ ನೋಟೀಸ್ ಕೊಟ್ಟರೂ ಜಾಲಿವುಡ್ ಸ್ಟುಡಿಯೋ ಅಂಡ್ ಅಡ್ವೆಂಚರ್ಸ್ ಡೋಂಟ್ ಕೇರ್ ಸ್ವಭಾವ ಪ್ರದರ್ಶಿಸಿದ್ದರು. ಇದರಿಂದಾಗಿ ನಿನ್ನೆ ಮತ್ತೊಮ್ಮೆ ಜಾಲಿವುಡ್ ಸ್ಟುಡಿಯೋ ಮತ್ತು ಅಡ್ವೆಂಚರ್ಸ್ ಗೆ ಬೀಗ ಜಡಿಯಲು ಮಾಲಿನ್ಯ ನಿಯಂತ್ರಣ ಮಾಡಲು ಆದೇಶ ಹೊರಡಿಸಿತ್ತು . ಆ ಆದೇಶವನ್ನು ಇಂದು ಪೊಲೀಸ್ ಭದ್ರತೆ ಪಡೆದು ರಾಮನಗರ ತಹಸೀಲ್ದಾರ್ , ಕಂದಾಯ ಇಲಾಖೆ ಅಧಿಕಾರಿಗಳು ಜಾರಿಗೊಳಿಸಿದ್ದಾರೆ.
ಜಾಲಿವುಡ್ ಸ್ಟುಡಿಯೋಸ್‌ಗೆ ಬಿತ್ತು ಬೀಗ: ಬಿಗ್‌ಬಾಸ್ ಸ್ಥಗಿತಕ್ಕೆ ಸೂಚನೆ
