Monday, December 22, 2025

ಜಸ್ಟ್ ಸಿಗರೇಟ್ ಗಾಗಿ ರೈಲನ್ನೇ ನಿಲ್ಲಿಸಿದ ಲೋಕೋ ಪೈಲಟ್: ನೆಟ್ಟಿಗರು ಫುಲ್ ಗರಂ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಪ್ರದೇಶದ ಮಲ್ಕನ್ ರೈಲ್ವೆ ಕ್ರಾಸಿಂಗ್‌ನಲ್ಲಿ ಲೋಕೋ ಪೈಲಟ್ ಒಬ್ಬರು ಸಿಗರೇಟ್‌ ಖರೀದಿಗಾಗಿ ಸುಮಾರು 10 ನಿಮಿಷಗಳ ಕಾಲ ಸರಕು ರೈಲನ್ನು ನಿಲ್ಲಿಸಿದ್ದಾನೆ.

ರೈಲು ನಿಲುಗಡೆಯಾಗಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ವರದಿಗಳ ಪ್ರಕಾರ, ರೈಲ್ವೆ ಅಧಿಕಾರಿಗಳು ಈ ನಿಲುಗಡೆಯ ಹಿಂದಿನ ಕಾರಣಗಳನ್ನು ಕಂಡು ಹಿಡಿಯಲು ತನಿಖೆಯನ್ನು ಪ್ರಾರಂಭಿಸಿದ್ದಾರೆ. ವೈರಲ್ ಆಗಿರುವ ವಿಡಿಯೊದಲ್ಲಿ ರಾಯ್‌ಬರೇಲಿ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಮಲ್ಕನ್ ಲೆವೆಲ್ ಕ್ರಾಸಿಂಗ್‌ನಲ್ಲಿ ಉದ್ದವಾದ ಸರಕು ಸಾಗಣೆ ರೈಲು ನಿಂತಿರುವುದನ್ನು ಕಂಡು ಬಂದಿದೆ.

https://x.com/Mithileshdhar/status/2002967337465741612?ref_src=twsrc%5Etfw%7Ctwcamp%5Etweetembed%7Ctwterm%5E2002967337465741612%7Ctwgr%5Edd2757aa02035156fd4790d5b62efa7a395f759c%7Ctwcon%5Es1_&ref_url=https%3A%2F%2Fvishwavani.news%2Fviral%2Floco-pilot-stops-train-for-10-minutes-at-railway-crossing-to-buy-a-cigarette-video-goes-viral-64355.html

ಲೋಕೋ ಪೈಲಟ್ ರೈಲಿನಿಂದ ಇಳಿದು ಹಳಿಗಳನ್ನು ದಾಟುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಕೆಲವು ಮಾಧ್ಯಮ ವರದಿಗಳ ಪ್ರಕಾರ, ಲೋಕೋ ಪೈಲಟ್ ಹತ್ತಿರದ ಅಂಗಡಿಯಿಂದ ಸಿಗರೇಟ್ ಖರೀದಿಸಲು ಹೊರಬಂದಿದ್ದ ಎಂದು ಹೇಳಲಾಗಿದೆ. ಆದರೆ ಈ ಹೇಳಿಕೆಯನ್ನು ಅಧಿಕೃತವಾಗಿ ದೃಢೀಕರಿಸಲಾಗಿಲ್ಲ.

ಸ್ಥಳೀಯ ಪ್ರಯಾಣಿಕರು ವಿಳಂಬದ ಬಗ್ಗೆ ಹತಾಶೆ ವ್ಯಕ್ತಪಡಿಸಿದ್ದು, ಕ್ರಾಸಿಂಗ್‌ನಲ್ಲಿ ಇಂತಹ ನಿಲುಗಡೆಗಳು ಆಗಾಗ ಸಂಭವಿಸುತ್ತವೆ ಎಂದು ಹೇಳಿಕೊಂಡಿದ್ದಾರೆ. ಹಲವು ಸ್ಥಳೀಯರು ಲೋಕೋ ಪೈಲಟ್ ವಿರುದ್ಧ ನಿರ್ಲಕ್ಷ್ಯದ ಆರೋಪ ಮಾಡಿದ್ದಾರೆ.

error: Content is protected !!