Friday, December 19, 2025

ʼಪಾಕಿಸ್ತಾನ ಜಿಂದಾಬಾದ್‌ʼ ಮೂರು ವರ್ಷದಲ್ಲಿ ದಾಖಲಾಗಿರೋ ಕೇಸ್‌ ಎಷ್ಟು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದಲ್ಲಿ ಕಳೆದ 3 ವರ್ಷಗಳಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಕುರಿತು 12 ಕೇಸ್ ದಾಖಲು ಮಾಡಲಾಗಿದೆ ಅಂತ ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸಿಟಿ ರವಿ ಪ್ರಶ್ನೆ ಉತ್ತರ ನೀಡಿದ ಸಚಿವರು, 2023 ರಿಂದ 2025 ಅವಧಿಯಲ್ಲಿ 12 ಕೇಸ್ ಪಾಕಿಸ್ತಾನ ಜಿಂದಾಬಾದ್ ಕೂಗಿದ ಸಂಬಂಧ ಸ್ವಯಂ ಪ್ರೇರಿತ ದೂರು ಮತ್ತು ದೂರಿನ ಆಧಾರದಲ್ಲಿ ಕೇಸ್ ದಾಖಲು ಮಾಡಲಾಗಿದೆ.

12 ಕೇಸ್ ನಲ್ಲಿ 5 ಕೇಸ್ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿದೆ. 2 ಕೇಸ್ ಬಿ ರಿಪೋರ್ಟ್ ವರದಿ ಸಲ್ಲಿಸಲಾಗಿದೆ. 3 ಕೇಸ್ ತನಿಖೆ ನಡೆಯುತ್ತಿದೆ. 1 ಕೇಸ್ ಸಿ ರಿಪೋರ್ಟ್ ಹಾಕಲಾಗಿದೆ. 1 ಕೇಸ್ FSL ನಿಂದ ವರದಿ ಬಾಕಿ ಬರಬೇಕಿದೆ ಅಂತ ಸಚಿವರು ತಿಳಿಸಿದರು.

error: Content is protected !!