February 8, 2026
Sunday, February 8, 2026
spot_img

ಇದೇ ನೋಡಿ ಪ್ರಪಂಚದ ಅತೀ ಹೆಚ್ಚು ಖಾರವಾಗಿರೋ ಮೆಣಸಿನಕಾಯಿ! ಇದನ್ನ ತಿಂದ್ರೆ ನವರಂಧ್ರಗಳಿಂದ ನೀರು ಬರೋದು ಗ್ಯಾರಂಟಿ

ಖಾರದ ರುಚಿ ಅಂದ್ರೆ ಕೆಲವರಿಗೆ ತುಂಬಾ ಇಷ್ಟ. ಊಟದಲ್ಲಿ ಮೆಣಸಿನಕಾಯಿ ಇಲ್ಲದೆ ತಿನ್ನೋದಕ್ಕೂ ಮನಸ್ಸೇ ಆಗೋದಿಲ್ಲ. ಆದರೆ ಪ್ರಪಂಚದಲ್ಲಿ ಕೆಲವು ಮೆಣಸಿನಕಾಯಿಗಳು ಇಷ್ಟು ಖಾರವಾಗಿರುತ್ತವೆ, ಅದನ್ನು ಒಂದು ತುಂಡು ತಿಂದರೂ ಕಣ್ಣೀರು, ಬೆವರು, ಉಸಿರಾಟ ಎಲ್ಲವೂ ಒಟ್ಟಿಗೆ ಹೆಚ್ಚಾಗಬಹುದು. ಅಷ್ಟು ತೀವ್ರ ಖಾರವಿರುವ ಮೆಣಸಿನಕಾಯಿಗಳು ಸಾಮಾನ್ಯ ಅಡುಗೆಗೆ ಬಳಸುವ ಮೆಣಸಿನಕಾಯಿಗಿಂತ ಹಲವು ಪಟ್ಟು ಹೆಚ್ಚು ತೀಕ್ಷ್ಣವಾಗಿರುತ್ತವೆ.

ಪ್ರಪಂಚದಲ್ಲಿ “ಕ್ಯಾರೊಲಿನಾ ರೀಪರ್” ಎಂಬ ಮೆಣಸಿನಕಾಯಿ ಅತೀ ಹೆಚ್ಚು ಖಾರವಾಗಿರುವುದಾಗಿ ಹೆಸರುವಾಸಿಯಾಗಿದೆ. ಇದರ ಖಾರವನ್ನು ಅಳೆಯುವ ಸ್ಕೋವಿಲ್ ಮಾಪಕದಲ್ಲಿ ಇದು ಲಕ್ಷಾಂತರ ಮಟ್ಟ ತಲುಪುತ್ತದೆ.

ತಿಂದ್ರೆ ಹೇಗಿರುತ್ತೆ ಗೊತ್ತಾ?
ಇಂತಹ ಮೆಣಸಿನಕಾಯಿ ತಿಂದರೆ ಕಣ್ಣು, ಮೂಗು, ಬಾಯಿ ಎಲ್ಲೆಡೆಯಿಂದ ನೀರು ಬರಬಹುದು ಅಂತ ಅಂದಾಜಿಸೋಕು ಸಾಧ್ಯ ಇಲ್ಲ ಅಷ್ಟ್ಟೊಂದು ಖಾರ. ನಾಲಿಗೆ ಸುಡುವ ಅನುಭವ, ಬೆವರು ಹೆಚ್ಚಾಗುವುದು ಸಹ ಸಾಮಾನ್ಯ.

ಮೆಣಸಿನಕಾಯಿಯಲ್ಲಿ ಇರುವ ‘ಕ್ಯಾಪ್ಸೈಸಿನ್’ ಎನ್ನುವ ರಾಸಾಯನಿಕ ಪದಾರ್ಥವೇ ಖಾರಕ್ಕೆ ಕಾರಣ. ಇದರ ಪ್ರಮಾಣ ಹೆಚ್ಚು ಇದ್ದಷ್ಟು ಖಾರದ ತೀವ್ರತೆ ಹೆಚ್ಚಾಗುತ್ತದೆ.

ಅಲ್ಪ ಪ್ರಮಾಣದಲ್ಲಿ ಖಾರ ತಿನ್ನುವುದು ಜೀರ್ಣಕ್ರಿಯೆಗೆ ಸಹಾಯ ಮಾಡಬಹುದು. ಆದರೆ ಅತಿಯಾಗಿ ತಿಂದರೆ ಹೊಟ್ಟೆ ಉರಿ, ಅಸ್ವಸ್ಥತೆ, ತಲೆ ಸುತ್ತು ಕಾಣಿಸಬಹುದು. ಇಂತಹ ಅತೀ ಖಾರದ ಮೆಣಸಿನಕಾಯಿ ತಿನ್ನುವ ಮೊದಲು ಜಾಗ್ರತೆ ಅವಶ್ಯಕ. ಎಲ್ಲರಿಗೂ ಇದರ ಖಾರ ತಾಳುವ ಶಕ್ತಿ ಇರೋದಿಲ್ಲ. ಆದ್ದರಿಂದ ಇದರಿಂದ ದೂರ ಉಳಿಯೋದೇ ಬೆಸ್ಟ್.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !