March 25, 2026
Wednesday, March 25, 2026
spot_img

ಪ್ರೀತಿ ಮಾಡೋಕೆ ಒಕೆ ಆದರೆ ಮದುವೆಯಾಗೋಕೆ ಜಾತಿ ಬೇಕು ಎಂದ ಪ್ರಿಯಕರ, ಯುವತಿ ಆತ್ಮಹತ್ಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪ್ರೀತಿ ಮಾಡೋಕೆ ಯಾವ ಅಡ್ಡಿಯೂ ಇಲ್ಲ, ಆದರೆ ಮದುವೆ ಅಂತ ಬಂದಾಗ ಜನರಿಗೆ ಜಾತಿ ಅಡ್ಡವಾಗುತ್ತದೆ. ಪ್ರೀತಿಯ ಮುಂದೆ ಜಾತಿಯನ್ನು ಆಯ್ಕೆ ಮಾಡಿ ಪ್ರೀತಿಸಿದವರ ಕೈ ಬಿಡುತ್ತಾರೆ.

ತಮಿಳುನಾಡಿನ ಸೇಲಂನಲ್ಲಿ ಪದವಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಪ್ರಿಯಕರ ಮದುವೆ ಬೇಡ ಎಂದಿದ್ದಕ್ಕೆ ಈ ರೀತಿ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.

ದಿನಗೂಲಿ ಕೆಲಸದವನಾದ ಕಾರ್ತಿಕೇಯನ್‌ ಎನ್ನುವನನ್ನು ಯುವತಿ ಪ್ರೀತಿಸಿದ್ದಳು. ಇಬ್ಬರ ಜಾತಿ ಬೇರೆಯಾಗಿದೆ. ಯುವತಿ ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದವಳಾಗಿದ್ದರೆ, ಯುವಕ ಅತ್ಯಂತ ಹಿಂದುಳಿದ ವರ್ಗಕ್ಕೆ ಸೇರಿದವನಾಗಿದ್ದಾನೆ. ಇತ್ತೀಚೆಗೆ ಯುವಕ ಜಾತಿ ವಿಚಾರ ಪ್ರಸ್ತಾಪಿಸಿ, ಮದುವೆಗೆ ನಿರಾಕರಿಸಿದ್ದಾನೆ.

ಇದರಿಂದ ಮನನೊಂದಿದ್ದ ಯುವತಿ ಫೆಬ್ರವರಿ 21ರಂದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕೂಡಲೇ ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಸರ್ಕಾರಿ ಮೋಹನ್ ಕುಮಾರಮಂಗಲಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟಿದ್ದಾಳೆ.

ಯುವತಿಯ ಕುಟುಂಬದವರು ಮೃತದೇಹ ಪಡೆಯಲು ನಿರಾಕರಿಸಿದ್ದು, ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಯುವಕನನ್ನು ಅರೆಸ್ಟ್‌ ಮಾಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !