March 27, 2026
Friday, March 27, 2026
spot_img

ಸಿಕ್ಕಾಪಟ್ಟೆ ಲಕ್ಕಿ ದಾವಣಗೆರೆ, ಬಜೆಟ್‌ನಲ್ಲಿ ಸ್ಪೆಷಲ್‌ ಆಗಿ 100 ಕೋಟಿ ಅನುದಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

2026-27ನೇ ಸಾಲಿನ ಬಜೆಟ್‌ನ್ನು ಸಿಎಂ ಸಿದ್ದರಾಮಯ್ಯ ಮಂಡಿಸುತ್ತಿದ್ದು, ಈ ಬಾರಿ ದಾವಣಗೆರೆಗೆ ಸ್ಪೆಷಲ್‌ ಆಗಿ 100 ಕೋಟಿ ಅನುದಾನ ಮೀಸಲಿಡಲಾಗಿದೆ.

ಆಶ್ಚರ್ಯವಾದರೂ ಸತ್ಯ. ದಾವಣಗೆರೆ ಜಿಲ್ಲೆ ಜನರ ಅದೃಷ್ಟ ಖುಲಾಯಿಸಿದ್ದು, ಒಂದೇ ಜಿಲ್ಲೆಯ ಅಭಿವೃದ್ಧಿಗೆ 100 ಕೋಟಿ ಅನುದಾನ ಮೀಸಲಿಡಲಾಗಿದೆ.

ನಗರಾಭಿವೃದ್ಧಿ ಇಲಾಖೆಯಿಂದ ವಿಶೇಷ ಅನುದಾನ ಘೋಷಣೆ ಮಾಡಲಾಗಿದ್ದು, ದಾವಣಗೆರೆ ದಕ್ಷಿಣ ಕ್ಷೇತ್ರದ ಎಸ್‌ಸಿ, ಎಸ್‌ಟಿ, ಅಲ್ಪಸಂಖ್ಯಾತರು ಹೆಚ್ಚಾಗಿ ವಾಸಿಸುತ್ತಿರುವ ಭಾಗಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು 100 ಕೋಟಿ ಅನುದಾನ ಘೋಷಣೆ ಮಾಡಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !