ಕಡಿಮೆ ಸಮಯದಲ್ಲಿ, ಕಡಿಮೆ ಪಾತ್ರೆಗಳಲ್ಲಿ ಮತ್ತು ಹೆಚ್ಚು ರುಚಿಯೊಂದಿಗೆ ತಯಾರಾಗುತ್ತೆ ಈ ಒನ್ ಪಾಟ್ ವೆಜ್ ಬಿರಿಯಾನಿ. ಲಂಚ್ಬಾಕ್ಸ್ಗೂ ಸೂಕ್ತ, ಮನೆಯ ಊಟಕ್ಕೂ ಪರ್ಫೆಕ್ಟ್.
ಬೇಕಾಗುವ ಸಾಮಗ್ರಿಗಳು
ಬಾಸ್ಮತಿ ಅಕ್ಕಿ – 1 ಕಪ್
ಕ್ಯಾರೆಟ್ – 1
ಬೀನ್ಸ್ – 8 ರಿಂದ 10
ಆಲೂಗಡ್ಡೆ – 1
ಬಟಾಣಿ – ½ ಕಪ್
ಈರುಳ್ಳಿ – 2
ಟೊಮೇಟೊ – 1
ಹಸಿಮೆಣಸಿನಕಾಯಿ – 2
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀ ಸ್ಪೂನ್
ಮೊಸರು – 2 ಟೇಬಲ್ ಸ್ಪೂನ್
ಪುದೀನಾ – ಸ್ವಲ್ಪ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಲವಂಗ – 3
ಏಲಕ್ಕಿ – 2
ದಾಲ್ಚಿನ್ನಿ – 1 ತುಂಡು
ಬಿರಿಯಾನಿ ಎಲೆ – 1
ಬಿರಿಯಾನಿ ಮಸಾಲೆ – 1 ಟೀ ಸ್ಪೂನ್
ಅರಿಶಿಣ – ಚಿಟಿಕೆ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ / ತುಪ್ಪ – 2 ಟೇಬಲ್ ಸ್ಪೂನ್
ನೀರು – 2 ಕಪ್
ಮಾಡುವ ವಿಧಾನ
ಮೊದಲು ಅಕ್ಕಿಯನ್ನು ತೊಳೆದು 15–20 ನಿಮಿಷ ನೆನೆಸಿಡಿ.
ಒಂದು ದೊಡ್ಡ ಪಾತ್ರೆ ಪಾತ್ರೆಗೆ ಎಣ್ಣೆ ಅಥವಾ ತುಪ್ಪ ಹಾಕಿ ಬಿಸಿ ಮಾಡಿ. ನಂತರ ಲವಂಗ, ಏಲಕ್ಕಿ, ದಾಲ್ಚಿನ್ನಿ ಮತ್ತು ಬಿರಿಯಾನಿ ಎಲೆ ಹಾಕಿ ಸುಗಂಧ ಬರುವವರೆಗೆ ಹುರಿಯಿರಿ.
ಈಗ ಈರುಳ್ಳಿ ಹಾಕಿ ಗೋಲ್ಡನ್ ಬಣ್ಣ ಬರುವವರೆಗೆ ಫ್ರೈ ಮಾಡಿ. ಬಳಿಕ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸು ಮತ್ತು ಟೊಮೇಟೊ ಸೇರಿಸಿ ಚೆನ್ನಾಗಿ ಬೇಯಿಸಿ.
ಕತ್ತರಿಸಿದ ತರಕಾರಿಗಳು ಮತ್ತು ಬಟಾಣಿ ಹಾಕಿ 3–4 ನಿಮಿಷ ಹುರಿಯಿರಿ. ನಂತರ ಮೊಸರು, ಬಿರಿಯಾನಿ ಮಸಾಲೆ, ಉಪ್ಪು, ಅರಿಶಿಣ, ಪುದೀನಾ ಮತ್ತು ಕೊತ್ತಂಬರಿ ಸೇರಿಸಿ ಕಲಸಿ.
ನೆನೆಸಿದ ಅಕ್ಕಿ ಸೇರಿಸಿ ನಿಧಾನವಾಗಿ ಮಿಕ್ಸ್ ಮಾಡಿ. ನಂತರ 2 ಕಪ್ ನೀರು ಹಾಕಿ ಮುಚ್ಚಿಟ್ಟು ಮಧ್ಯಮ ಉರಿಯಲ್ಲಿ 12–15 ನಿಮಿಷ ಬೇಯಿಸಿ.
ನೀರು ಸಂಪೂರ್ಣ ಹೀರಿಕೊಂಡ ನಂತರ 5 ನಿಮಿಷ ದಮ್ನಲ್ಲಿ ಬಿಡಿ. ನಂತರ ಬಿಸಿ ಬಿಸಿ ಬಿರಿಯಾನಿಯನ್ನು ರೈತ ಅಥವಾ ಮೊಸರಿನ ಜೊತೆ ಸರ್ವ್ ಮಾಡಿ.



